ದಿ ಶೀಪ್ ಡಿಟೆಕ್ಟಿವ್ಸ್ ಹೆಸರು ಕೇಳಿದ ತಕ್ಷಣ ಇದು ಕಂಪ್ಲೀಟ್ ಮಕ್ಕಳ ಸಿನಿಮಾ ಅಥವಾ ಕಾಮಿಡಿ ಎಂಟರ್ಟೈನರ್ ಇರಬಹುದು ಅಂತ ಅನ್ಕೊಂಡಿದ್ದೆ ಆದರೆ ಟ್ರೈಲರ್ ನೋಡಿದಾಗಲೇ ಒಂದು ಕ್ಯೂರಿಯಾಸಿಟಿ ಇತ್ತು ಶೀಪ್ಗಳು ಮರ್ಡರ್ ಮಿಸ್ಟ್ರಿ ಸಾಲ್ವ್ ಮಾಡೋದು ಅಂದ್ರೆ ಹೇಗೆ ಅದು ವರ್ಕ್ ಆಗಬಹುದಾ ಹಾಗಾಗಿ ಸಿನಿಮಾ ನೋಡಿದಮೇಲೆ ಆ ಕಾನ್ಸೆಪ್ಟ್ ನಿಜವಾಗ್ಲೂ ವರ್ಕ್ ಆಯ್ತಾ ಏನೆಲ್ಲ ಇಷ್ಟ ಆಯ್ತು ಏನೆಲ್ಲ ಕಷ್ಟ ಆಯ್ತು ಎಲ್ಲವನ್ನ ಈ ರಿವ್ಯೂ ಅಲ್ಲಿ ಹೇಳ್ತೀನಿ ಬನ್ನಿ ನೋಡ್ಕೊಂಡು ಬರೋಣ ಹಾಯ್ ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ಇಲ್ಲಿ ಮುಖ್ಯ ಪಾತ್ರದ ಹೆಸರು ಜಾರ್ಜ್ ಹಾಡಿ ಕುರಿಗಳನ್ನ ತುಂಬಾ ಪ್ರೀತಿಯಿಂದ ನೋಡಿಕೊಳ್ಳುವಂತ ಈ ಶೆಪರ್ಡ್ ಪ್ರತಿದಿನ.
ಅವುಗಳಿಗೆ ಡಿಟೆಕ್ಟಿವ್ ನಾವೆಲ್ಸ್ ನ ಓದಿ ಹೇಳ್ತಾ ಇರ್ತಾನೆ ಒಂದು ದಿನ ಜಾರ್ಜ್ ನಿಗೂಢವಾಗಿ ಸಾಯ್ತಾನೆ ಹ್ಯೂಮನ್ ಪೊಲೀಸ್ ಇನ್ವೆಸ್ಟಿಗೇಶನ್ ಸ್ಲೋ ಆಗ್ತಾ ಇರುವಾಗ ಜಾರ್ಜ್ ಇಂದ ಡಿಟೆಕ್ಟಿವ್ ಕಥೆಗಳನ್ನ ಕೇಳಿಕೊಂಡು ಬೆಳೆದಂತಹ ಕುರಿಗಳೇ ತಮ್ಮ ಓನರ್ನ ಸಾವಿನ ಹಿಂದೆ ಇರುವಂತಹ ನಿಜ ಹುಡುಕೋದಕ್ಕೆ ಹೋರಾಡ್ತವೆ ಸೋ ಆ ಮರ್ಡರ್ ಮಿಸ್ಟ್ರಿ ಹಿಂದೆ ಇರುವಂತಹ ಸತ್ಯ ಏನು ಅನ್ನೋದೆ ಸಿನಿಮಾದ ಪ್ಲಾಟ್ ನನಗೆ ಸಿಕ್ಕಪಟ್ಟೆ ಇಷ್ಟ ಆದದ್ದು ಇಲ್ಲಿನ ಟ್ರೀಟ್ಮೆಂಟ್ ಶೀಪ್ಗಳು ಡಿಟೆಕ್ಟಿವ್ ಆಗೋದು ಕೇಳೋದಕ್ಕೆ ತುಂಬಾ ಸಿಲ್ಲಿ ಕಾನ್ಸೆಪ್ಟ್ ಅಂತ ಅನಿಸಬಹುದು ಆದರೆ ಡೈರೆಕ್ಟರು ಅದನ್ನ ತುಂಬಾ ಸಿನ್ಸಿಯರಿಟಿ ಇಂದ ಹ್ಯಾಂಡಲ್ ಮಾಡಿದ್ದಾರೆ.
ಫಸ್ಟ್ ಫ್ಯೂ ಮಿನಿಟ್ಸ್ ನಲ್ಲಿ ಇದು ಕಂಪ್ಲೀಟ್ ಲೈಟ್ ಹಾರ್ಟೆಡ್ ಫ್ಯಾಮಿಲಿ ಎಂಟರ್ಟೈನರ್ ಜೋನ್ ಅಲ್ಲಿ ಸಾಗುತ್ತೆ. ಆದರೆ ಕಥೆ ಮುಂದೆ ಸಾಗ್ತಾ ಸಾಗ್ತಾ ಹೋದ ಹಾಗೆ ಗ್ರೀಫ್, ಲೋನ್ಲಿನೆಸ್ ಮತ್ತು ರಿಲೇಷನ್ಶಿಪ್ಸ್ ಬಗ್ಗೆ ಮಾತಾಡೋದಕ್ಕೆ ಸ್ಟಾರ್ಟ್ ಮಾಡುತ್ತೆ. ಆ ಟೋನಲ್ ಶಿಫ್ಟ್ ನನಗೆ ಪರ್ಸನಲಿ ತುಂಬಾ ಚೆನ್ನಾಗಿ ವರ್ಕ್ ಆಯ್ತು. ನಾನು ಚಿಕ್ಕವನಾಗಿದ್ದಾಗ ಈ ಜಾನರ್ನ ಸಿನಿಮಾ ತುಂಬಾ ಕಾಮನ್ ಆಗಿ ಬರ್ತಾ ಇದ್ವು ಸ್ಟುವರ್ಟ್ ಲಿಟಲ್ ಡಾಕ್ಟರ್ ಡೂ ಲಿಟಲ್ ಹೀಗೆ ಅನಿಮಲ್ಸ್ ನ ಕಥೆಯ ಭಾಗವಾಗಿ ಅಳವಡಿಸಿ ಅದರ ಸುತ್ತ ಹ್ಯೂಮನ್ಸ್ ನೇ ಸೈಡ್ ಕ್ಯಾರೆಕ್ಟರ್ಸ್ ತರ ಟ್ರೀಟ್ ಮಾಡಿ .
ಒಳ್ಳೆ ಎಮೋಷನ್ ಅನ್ನ ಜನರೇಟ್ ಮಾಡ್ತಾ ಇದ್ರು ಇತ್ತೀಚಿಗೆ ಈ ತರದ ಕಂಟೆಂಟ್ ಗಳು ಕಮ್ಮಿಯಾಗಿೋಗಿತ್ತು ಬಟ್ ಈ ಸಿನಿಮಾ ಆ ಜಾನರ್ನ ಮತ್ತೆ ರಿವೈವ್ ಮಾಡುತ್ತೆ ಅಂತ ಖಂಡಿತ ಅನಿಸ್ತು ಹ್ಯೂಜ್ ಜಾಕ್ ಮ್ಯಾನ್ ಅವರ ಜಾರ್ಜ್ ಪಾತ್ರ ಸ್ಕ್ರೀನ್ ಟೈಮ್ ಕಮ್ಮಿ ಇದ್ರೂ ಸಹ ಕಂಪ್ಲೀಟ್ ಸಿನಿಮಾದಲ್ಲಿ ಅವರ ಪ್ರೆಸೆನ್ಸ್ ಮ್ಯಾಜಿಕ್ ತರ ವರ್ಕ್ ಆಗುತ್ತೆ ಶೀಪ್ ಕ್ಯಾರೆಕ್ಟರ್ಸ್ಗೆ ಕೊಟ್ಟಂತಹ ಪರ್ಸನಾಲಿಟಿಸ್ ಕೂಡ ತುಂಬಾ ಎಂಜಾಯಬಲ್ ಆಗಿತ್ತು ಒಂದೊಂದು ಶೀಪ್ಗೂ ಬೇರೆ ಬೇರೆ ಗುಣಗಳಿದೆ ಅಂಡ್ ಅವರ ಮಧ್ಯೆ ನಡೆಯುವಂತಹ ಡಿಸ್ಕಷನ್ಸ್ ಕ್ಲೂಸ್ ನ ಕನೆಕ್ಟ್ ಮಾಡುವಂತಹ ರೀತಿ ಮತ್ತೆ ಮಿಸ್ಟ್ರಿನ ಸಾಲ್ವ್ ಮಾಡುವಂತಹ ಪ್ರಯತ್ನ ತುಂಬಾ ನ್ಯಾಚುರಲ್ ಆಗಿ ಮೂಡ್ ಬಂದಿದೆ. ಕ್ಲೂಸ್ ನ ಆಡಿಯನ್ಸ್ ಜೊತೆಗೆ ಶೇರ್ ಮಾಡ್ತಾ ಹೋಗೋದ್ರಿಂದ.
ನಾವು ಕೂಡ ಇನ್ವೆಸ್ಟಿಗೇಶನ್ ಪಾರ್ಟ್ ಆಗ್ಬಿಡ್ತೀವಿ. ಮಿಸ್ಟ್ರಿ ಜಾನರ್ ಇಷ್ಟ ಪಡುವಂತಹ ಆಡಿಯನ್ಸ್ ಗೆ ಇದು ಸಿಕ್ಕಾಪಟ್ಟಿ ಯೂನಿಕ್ ಎಕ್ಸ್ಪೀರಿಯನ್ಸ್ ಆಗಬಹುದು. ಇನ್ನು ಟೆಕ್ನಿಕಲ್ ಸೈಡ್ ಬಗ್ಗೆ ಹೇಳೋದಾದ್ರೆ ವಿಶುವಲ್ಸ್ ತುಂಬಾ ವಾರ್ಮ್ ಮತ್ತೆ ಕಲರ್ಫುಲ್ ಆಗಿದೆ. ಸಿಜಿಐ ಶೇಪ್ ಗಳು ಯಾವುದು ಸಹ ಆರ್ಟಿಫಿಷಿಯಲ್ ಅನ್ನುವಂತಹ ಫೀಲಿಂಗ್ ಕೊಡಲ್ಲ. ಅದರ ಹಿಂದೆ ಹೋಗಿರುವಂತಹ ಡೀಟೇಲಿಂಗ್ ಮೈಂಡ್ ಬ್ಲೋಯಿಂಗ್ ಅಂತಾನೆ ಹೇಳಬೇಕು. ಬ್ಯಾಕ್ಗ್ರೌಂಡ್ ಸ್ಕೋರ್ ಕೂಡ ಸಿನಿಮಾದ ಕೋಸಿ ಅಟ್ಮಾಸ್ಫಿಯರ್ ನ ಮೇಂಟೈನ್ ಮಾಡೋದ್ರಲ್ಲಿ ಒಳ್ಳೆ ಸಪೋರ್ಟ್ ಮಾಡುತ್ತೆ.
ಎಸ್ಪೆಷಲಿ ಎಮೋಷನಲ್ ಸೀನ್ಸ್ ಅಲ್ಲಿ ಮ್ಯೂಸಿಕ್ ತುಂಬಾ ಸಟಲ್ ಆಗಿ ವರ್ಕ್ ಆಗುತ್ತೆ. ಇಲ್ಲಿ ಕಥೆ ತುಂಬಾ ಸೀರಿಯಸ್ ಅಲ್ಲ. ಆದರೆ ಆ ಮೋಮೆಂಟ್ ಅಲ್ಲಿ ಆ ಘಟನೆಗಳ ಜಾರದೊಳಗೆ ನಮ್ಮನ್ನ ಎಂಗೇಜಿಂಗ್ ಆಗಿ ಇಡುವಂತಹ 100% ಪ್ರಯತ್ನ ಆನ್ ಪಾಯಿಂಟ್ ಲ್ಯಾಂಡ್ ಆಗುತ್ತೆ. ಇದು ದಿನಗಟ್ಟಲೆ ನೆನಪಲ್ಲಿ ಉಳಿಯುವಂತಹ ಸಿನಿಮಾ ಆಗದೆ ಇರಬಹುದು. ಬಟ್ ಆ ಮೋಮೆಂಟ್ ಗೆ ಸಿನಿಮಾ ನೋಡಿ ಮುಗಿಸೋವರೆಗೂ ಒಂದು ಕಾಮ್ ವೈಬ್ನ್ನ ಕೊಡುತ್ತೆ ಅಂತ ಹೇಳಬಹುದು. ಆದ್ರೆ ಸಿನಿಮಾ ಪರ್ಫೆಕ್ಟ್ ಅಂತ ಹೇಳೋದಕ್ಕೆ ಆಗಲ್ಲ.
ಮಿಸ್ಟರಿ ಜಾನರ್ ರೆಗ್ಯುಲರ್ ಆಗಿ ನೋಡೋರಿಗೆ ಕೆಲವು ಟ್ವಿಸ್ಟ್ ಸ್ವಲ್ಪ ಪ್ರೆಡಿಕ್ಟಬಲ್ ಅಂತ ಅನಿಸಬಹುದು. ಕೆಲವು ಸಪೋರ್ಟಿಂಗ್ ಹ್ಯೂಮನ್ ಕ್ಯಾರೆಕ್ಟರ್ಸ್ ಗಳನ್ನ ಇನ್ನು ಎಕ್ಸ್ಪ್ಲೋರ್ ಮಾಡಬಹುದಿತ್ತೇನೋ ಅಂತ ಕೂಡ ಅನಿಸ್ತು. ಬಟ್ ಓವರಆಲ್ ಕಡಕ್ಕಾಗಿ ಹೇಳೋದಾದ್ರೆ ದ ಶೀಪ್ ಡಿಟೆಕ್ಟಿವ್ಸ್ ಕಂಪ್ಲೀಟ್ಲಿ ಮಜಾ ಕೊಡುವಂತಹ ಸಿನಿಮಾ ಇದು ಕೇವಲ ಟಾಕಿಂಗ್ ಶೀಪ್ .ಸಿನಿಮಾ ಅಲ್ಲ ಮಿಸ್ಟರಿ ಕಾಮಿಡಿ ಮತ್ತೆ ಎಮೋಷನ್ಸ್ ನ ತುಂಬಾ ಚೆನ್ನಾಗಿ ಬ್ಲೆಂಡ್ ಮಾಡಿರುವಂತಹ ಹೋಲ್ಸಮ್ ವಾಚ್ ಎಸ್ಪೆಷಲಿ ಫ್ಯಾಮಿಲಿ ಆಡಿಯನ್ಸ್ ಮಿಸ್ಟರಿ ಲವರ್ಸ್ ಮತ್ತೆ ಫೀಲ್ ಗುಡ್ ಸಿನಿಮಾಗಳನ್ನ ಇಷ್ಟ ಪಡುವಂತಹ ಆಡಿಯನ್ಸ್ ಗೆ ಖಂಡಿತವಾಗ್ಲೂ. ರೆಕಮೆಂಡ್ ಮಾಡ್ತೀನಿ ಪ್ರೈಮ್ ವಿಡಿಯೋನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅವೈಲಬಲ್ ಇದೆ ಇದಾಗಿತ್ತು ದ ಶೀಪ್ ಡಿಟೆಕ್ಟಿವ್ ಸಿನಿಮಾದ ರಿವ್ಯೂ ನೀವು ಈ ಸಿನಿಮಾನ ಆಲ್ರೆಡಿ ನೋಡಿದ್ರೆ ನಿಮಗೆ ಹೇಗೆ ಅನ್ನಿಸ್ತು ಅಂತ ಕಮೆಂಟ್ ಮಾಡಿ
.png)