ನಮ್ಮ STARS ಕಾಣೆಯಾಗಿದ್ದಾರೆ! ನಿಜಕ್ಕೂ ಏನಾಗಿದೆ? 😱 | Biggest Shock!

NS CREATION FF
0


 ಒಂದು ಕಾಲ ಇತ್ತು ಗುರುವೇ ಶುಕ್ರವಾರ ಬಂದರೆ ಸಾಕು ಕರ್ನಾಟಕದ ಪ್ರತಿ ಊರಲ್ಲೂ ಒಂತರ ಹಬ್ಬದ ವಾತಾವರಣ ಇರ್ತಾ ಇತ್ತು ಯಾವ ಸಿನಿಮಾ ರಿಲೀಸ್ ಆಗ್ತಾ ಇದೆ ಯಾವ ಥಿಯೇಟರ್ ಗೆ ಹೋಗೋಣ ಟಿಕೆಟ್ ಸಿಗುತ್ತಾ ಅಂತ ಜನ ಮಾತಾಡಿಕೊಳ್ತಾ ಇದ್ರು. ಒಂದು ಸ್ಟಾರ್ ಸಿನಿಮಾ ಥಿಯೇಟರ್ ನಲ್ಲಿ ಓಡ್ತಾ ಇರಬೇಕಾದ್ರೆ ಇನ್ನೊಬ್ಬ ಸ್ಟಾರ್ ಸಿನಿಮಾದ ಪೋಸ್ಟರ್ ಗೋಡೆ ಮೇಲೆ ಕಾಣ್ತಾ ಇತ್ತು .

 ನಾವು ಹೇಗೆ ಸ್ಟಾರ್ಸ್ ಗಳ ಕೊರತೆಯಿಂದ ನಮ್ಮ ಇಂಡಸ್ಟ್ರಿ ಬಳಲ್ತಾ ಇದೆ ಅನ್ನೋದನ್ನ ತಿಳಿಸಿಕೊಡ್ತೀವಿ ಬನ್ನಿ.  ಇನ್ನೊಂದು ತರ ಹೇಳಬೇಕು ಅಂದ್ರೆ ಸ್ಟಾರ್ಸ್ ಗಳು ಕಾಣೆ ಆಗಿದ್ದಾರೆ ಹಾಯ್ ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ .

ಸಿನಿಮಾ ಒಂದು ಕಡೆ ಡಾಕ್ಟರ್ ರಾಜ್ಕುಮಾರ್ ಇನ್ನೊಂದು ಕಡೆ ವಿಷ್ಣುವರ್ಧನ್ ಅವರು ಅಂಬರೀಶ್ ಅವರು ಶಂಕರ್ ನಾಗ್ ಅವರು ರವಿಚಂದ್ರನ್ ಅವರು ಶಿವಣ್ಣ ನಂತರ ಬಂದಂತಹ ಪೀಳಿಗೆನಲ್ಲಿ ಸುದೀಪ್ ಅವರು ದರ್ಶನ್ ಅವರು ಪುನೀತ್ ರಾಜ್ಕುಮಾರ್ ಅವರು ಯಶ್ ಅವರು ರಕ್ಷಿತ್ ಶೆಟ್ಟಿ ಅವರು ಹೀಗೆ ತುಂಬಾ ಜನ ಕನ್ನಡ ಚಿತ್ರರಂಗಕ್ಕೆ ಸ್ಟಾರ್ಗಳ ಕೊರತೆ ಅನ್ನೋದೇ ಇರಲಿಲ್ಲ .ಆದರೆ ಇವತ್ತು ನಾವು ಒಂತರ ವಿಚಿತ್ರವಾದ ಸ್ಟೇಜ್ನಲ್ಲಿ ಬಂದು ನಿಂತ್ಕೊಂಡು ಬಿಟ್ಟಿದೀವಿ ಗುರುವೇ ನಮ್ಮ ಸ್ಟಾರ್ಸ್ ಎಲ್ಲಿ ಹೋದ್ರು ಒಂದು ವರ್ಷದಲ್ಲಿ ನಮ್ಮ ದೊಡ್ಡ ಸ್ಟಾರ್ಸ್ ಗಳ ಎಷ್ಟು ಸಿನಿಮಾಗಳು ಬರ್ತಾ ಇವೆ ಒಂದಾದ್ರೂ ಬಂದಾ ಅದು ಕೂಡ ಇಲ್ಲ ಕೆಲವೊಮ್ಮೆ ಈ ಪ್ರಶ್ನೆಗೆ ಆನ್ಸರ್ ಹಡ್ಕೋದಕ್ಕೆ ತುಂಬಾ ಕಷ್ಟ ಆಗಿಬಿಡುತ್ತೆ. 

ಯಾಕಂದ್ರೆ ಒಂದು ಇಂಡಸ್ಟ್ರಿ ಜೀವಂತ ಆಗಿರಬೇಕು ಅಂತಂದ್ರೆ ಜನರು ಪ್ರತಿ ತಿಂಗಳು ಥಿಯೇಟರ್ಗೆ ಬರಬೇಕು ಹಾಗಾದ್ರೆ ಜನರನ್ನ ಥಿಯೇಟರ್ಗೆ ಕರ್ಕೊಂಡು ಬರುವಂತಹ ಜವಾಬ್ದಾರಿ ಯಾರದು ನಮ್ಮ ಸ್ಟಾರ್ಸ್ ಗಳದ್ದೆ ಅಲ್ವಾ ನಾವೆಲ್ಲರೂ ಸಿನಿಮಾ ಪ್ರೇಮಿಗಳೇ ಇರಬಹುದು ರಿವ್ಯೂಸ್ ನೋಡಿ ಟ್ರೈಲರ್ ನೋಡಿ ಕಂಟೆಂಟ್ ಚೆನ್ನಾಗಿದ್ರೆ ಥಿಯೇಟರ್ಗೂ ಹೋಗಬಹುದು .

ಆದರೆ ಕರ್ನಾಟಕದಲ್ಲಿ ಮಾಸಸ್ ಅಂದ್ರೆ ಲಕ್ಷಾಂತರ ಜನ ಸಿನಿಮಾ ನೋಡೋದು ಸ್ಟಾರ್ಸ್ ಗಾಗಿ ಅವರವರ ನೆಚ್ಚಿನ ತಾರಿಗಳನ್ನ ಸ್ಕ್ರೀನ್ ಮೇಲೆ ವಿಟ್ನೆಸ್ ಮಾಡೋದಕ್ಕೆ ಶಿವಣ್ಣನ ಸಿನಿಮಾ ಬಂದಿದೆ ಹೋಗೋಣ ರಕ್ಷಿತ್ ಶೆಟ್ಟಿ ಅವರು ಒಂದು ಒಳ್ಳೆ ಕಂಟೆಂಟ್ ಜೊತೆಗೆ ಮುಂದಿನ ವಾರ ಬರ್ತಾರಂತೆ ಬಾ ಹೋಗೋಣ ಅಂತ ಹೋಗೋರು .

ಇವತ್ತಿಗೂ ಇದ್ದಾರೆ ಆದರೆ ಅವರು ಕಾಯುತಿರುವಂತಹ ಸಿನಿಮಾಗಳು ಬರ್ತಾ ಇಲ್ಲ ಅಷ್ಟೇ ಒಂದು ತಿಂಗಳಲ್ಲಿ ಒಬ್ಬ ಸ್ಟಾರ್ ಸಿನಿಮಾ ಬಂದು ಸಾಕು ಗುರುವೇ ಥಿಯೇಟರ್ಗೆ ಜೀವ ಬರುತ್ತೆ ಟಿಕೆಟ್ ಕೌಂಟರ್ಗಳ ಮುಂದೆ ಜನ ಕಾಯ್ತಾರೆ ಥಿಯೇಟರಲ್ಲಿ ಜನ ಕಾಣಿಸ್ತಾರೆ ಥಿಯೇಟರ್ ಒಳಗಿರುವಂತಹ ಅಂಗಡಿಗೂ ವ್ಯಾಪಾರ ಆಗುತ್ತೆ ಪಾರ್ಕಿಂಗ್ ಫುಲ್ ಆಗುತ್ತೆ .

ಇಲ್ಲಿ ಒಂದು ಸಿನಿಮಾ ಮಾತ್ರ ಓಡಲ್ಲ ಒಂದು ಎಕೋಸಿಸ್ಟಮೇ ಓಡುತ್ತೆ ಜನಗಳು ಬದುಕುತಾರೆ ಬಟ್ ಇವತ್ತು ಆ ಇಡೀ ಎಕೋಸಿಸ್ಟಮ್ ಗೆ ಒಂದು ಬ್ರೇಕ್ ಬಿದ್ದಿದೆ ಅಂದ್ರೆ ತಪ್ಪೇ ಇಲ್ಲ ಕೊನೆಯ ಕೆಲವು ವರ್ಷಗಳಲ್ಲಿ ಕನ್ನಡ ಇಂಡಸ್ಟ್ರಿ ಕಂಟಿನ್ಯೂಸ್ ಸ್ಟ್ರಗಲ್ಸ್ ನ ನೋಡ್ತಾನೆ ಬಂದಿದೆ ರಿಲೀಸ್ಗಳ ಸಂಖ್ಯೆ ಜಾಸ್ತಿ ಇದ್ರೂನು ಥಿಯೇಟರ್ ಗೆ ಜನರನ್ನ ಕರ್ಕೊಂಡು ಬರುವಂತಹ ಹಿಟ್ಸ್ ತುಂಬಾ ಕಡಿಮೆಯಾಗಿದೆ .

ಇತ್ತೀಚೆಗೆ ಕನ್ನಡದ ಸಕ್ಸಸ್ ರೇಟ್ ಕೂಡ ಡ್ರಾಪ್ ಆಗ್ತಾ ಇದೆ ಹಿಂದೆ ನಮ್ಮ ಸ್ಟಾರ್ಸ್ ವರ್ಷಕ್ಕೆ ಎರಡು ಮೂರು ಸಿನಿಮಾಗಳು ಮಾಡ್ತಾ ಇದ್ರು ಇವತ್ತು ಒಂದು ಸಿನಿಮಾಗೆ ಮೂರು ವರ್ಷ ಆಗಿದೆ ನಾಲ್ಕು ವರ್ಷ ಆಗಿದೆ ಯಶ್ ಅವರ ಉದಾಹರಣೆ ತಗೊಂಡ್ರೆ ಅವರ ಕಡೆಯಿಂದ ಟಾಕ್ಸಿಕ್ ತರದ ಮ್ಯಾಗ್ನಮ್ ಓಪಸ್ ಸಿನಿಮಾಗಳು ಬರ್ತವೆ ಬಟ್ ಅದಕ್ಕೆ ಮಾಡಬೇಕಿರುವಂತಹ ವೇಟ್ ನೋಡ್ತಾ ಇದ್ರೆ .

ಇದು ನಿಜವಾಗ್ಲೂ ಅಷ್ಟೊಂದು ವರ್ತಿಟ್ಟ ಅಂತ ಅನ್ಸೋದು ತಪ್ಪಲ್ಲ ಸುದೀಪ್ ಅವರು ಕರೆಕ್ಟಾಗಿ ಒಂದು ವರ್ಷಕ್ಕೆ ಒಂದು ಸಿನಿಮಾ ಅನ್ನುವಂತಹ ಸ್ಟ್ರೀಕ್ ಅನ್ನ ಮೈಂಟೈನ್ ಮಾಡ್ಕೊಂಡೆ ಬರ್ತಿದ್ದಾರೆ,

 ಬಟ್ ಬಿಗ್ ಬಾಸ್ ಸಿಸಿಎಲ್ ನ ಕಡೆಗೂ ಕೂಡ ತಮ್ಮ ಟೈಮ್ನ್ನ ಇವರು ಡಿಸ್ಟ್ರಿಬ್ಯೂಟ್ ಮಾಡ್ತಿರುವಂತಹ ದೆಸೆಯಿಂದ ಅವರಿಂದ ಎರಡು ಸಿನಿಮಾಗಳನ್ನ ನಾವು ವರ್ಷಕ್ಕೆ ಎಕ್ಸ್ಪೆಕ್ಟ್ ಮಾಡೋದು ಕೂಡ ಕಷ್ಟವಾಗಿಬಿಟ್ಟಿದೆ ಇನ್ನು ದರ್ಶನ್ ಅವರು ಬರಿ ಕನ್ನಡಕ್ಕೆ ಮಾತ್ರ ಸೀಮಿತವಾಗಿ ಇಲ್ಲಿ ಮಾತ್ರ ಒಳ್ಳೆ ಸಿನಿಮಾಗಳನ್ನ ಕೊಡ್ತೀನಿ ಅಂತ ತೀರ್ಮಾನಿಸಿ ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳನ್ನ ತರ್ತಾ ಇದ್ರು ಬಟ್ ಅವರು ಕರೆಂಟ್ಲಿ ಜೈಲ್ನಲ್ಲಿ ಇರುವಂತ ಕಾರಣದಿಂದ ಅಲ್ಲೂ ಒಂದು ದೊಡ್ಡ ವಾಯ್ಡ್ ಕ್ರಿಯೇಟ್ ಆಗಿದೆ ಆ ಜಾಗನ ರಿಪ್ಲೇಸ್ ಮಾಡೋದಕ್ಕೆ ಸದ್ಯದ ಮಟ್ಟಿಗಂತೂ ಯಾರಿಂದನೂ ಸಾಧ್ಯ ಇಲ್ಲ ಅಷ್ಟೇ ಅಲ್ಲ ನಮ್ಮ ರಕ್ಷಿತ್ ಚಟ್ರು ಒಬ್ಬ ಕ್ರೆಡಿಬಲ್ ಸ್ಟಾರ್ .

ಕಂಟೆಂಟ್ ಗೆ ಗ್ಯಾರಂಟಿ ಅಂತ ಅನ್ನಿಸಿಕೊಳ್ಳೋರು .ಆದರೆ ಅವರಿಂದ ಕೂಡ ಸಿನಿಮಾ ಅಪ್ಡೇಟ್ಸ್ ಕಮ್ಮಿ ಆಗಿಬಿಟ್ಟಿದೆ ಅವರು ಏನಾಗಿದ್ದಾರೆ ಅನ್ನುವಂತಹ ಐಡಿಯಾನೇ ಗೊತ್ತಿಲ್ಲ ನಮ್ಮ ಕಮೆಂಟ್ ಸೆಕ್ಷನ್ ಅಲ್ಲೂ ರಕ್ಷಿತ್ ಶೆಟ್ಟಿ ಅವರ ಅಪ್ಡೇಟ್ಸ್ ಬರ್ಲಿ ಅಂತ ಕೇಳ್ತಾನೆ ಇರ್ತಾರೆ ನಮಗೆ ಗೊತ್ತಿದ್ರೆ ಅಲ್ವಾ ಕೂಡ ಅದು ನಟನೆಯಲ್ಲಿ ಮೌನ ನಿರ್ಮಾಣದಲ್ಲಿ ಮೌನ ಅಂಡ್ ಈ ಮೌನ ದೊಡ್ಡದಾಗಿ ಪೆಟ್ಟು ಕೊಡ್ತಾ ಇರೋದು ಮಾತ್ರ ಕನ್ನಡ ಇಂಡಸ್ಟ್ರಿಗೆನೆ ಇದೆಲ್ಲದರ ಮಧ್ಯೆ ನನಗೆ ತುಂಬಾ ನೆನಪಾಗುವಂತಹ ವ್ಯಕ್ತಿ ಯಾರು ಗೊತ್ತಾ ಅದು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು. ಅಪ್ಪು ಸಿನಿಮಾ ಅಂತಂದ್ರೆ ಇಡೀ ಫ್ಯಾಮಿಲಿ ಒಟ್ಟಿಗೆ ಹೋಗ್ತಾ ಇದ್ರು. 

ನಮ್ಮ ಮನೆಲೂ ಸೇರಿ ಮಿನಿಮಮ್ ಎರಡು ತಿಂಗಳು ಅವರ ಸಿನಿಮಾ ಥಿಯೇಟರ್ ನಲ್ಲಿ ಮೂವಿಂಗ್ ನಲ್ಲಿ ಇರ್ತಾ ಇತ್ತು. ಇವತ್ತು ಅಂತಹ ಫ್ಯಾಮಿಲಿ ಆಡಿಯನ್ಸ್ ಗೆ ನಾವು ಮಾಡ್ತಾ ಇರುವಂತಹ ಸಿನಿಮಾಗಳಾದ್ರೂ ಎಷ್ಟು? ಇದರಿಂದ ಆಗಿರುವಂತಹ ಇನ್ನೊಂದು ನಷ್ಟ ಅಂದ್ರೆ ಜನರಿಗೆ ಥಿಯೇಟರ್ಗೆ ಹೋಗುವಂತಹ ಅಭ್ಯಾಸ ಅಥವಾ ಹ್ಯಾಬಿಟ್ ಕಮ್ಮಿ ಆಗೋಯ್ತಲ್ಲ. ಈವನ್ ಅಬೋ ಆವರೇಜ್ ಡೀಸೆಂಟ್ ಸಿನಿಮಾಗಳು ಕೂಡ ಜನರನ್ನ ಫ್ಯಾಮಿಲಿಸ್ ಅನ್ನ ಅಟ್ರಾಕ್ಟ್ ಮಾಡೋದಕ್ಕೆ ಎಡುವುತಾ ಇದ್ದಾವೆ. ಮುಂದೆ ಇನ್ನೊಂದು ದೊಡ್ಡ ಪ್ರಶ್ನೆ ಇದೆ. ಬೇರೆ ರಾಜ್ಯದ ಜನರಿಗೆ ಕನ್ನಡ ಸಿನಿಮಾನ ಪರಿಚಯ ಮಾಡೋದು ಯಾರು? ದೊಡ್ಡ ಡೈರೆಕ್ಟರ್ ಸಿನಿಮಾನ ಅಥವಾ ಸ್ಟಾರ್ ಸಿನಿಮಾನ ಹಾನೆಸ್ಟ್ಲಿ ಹೇಳಬೇಕು ಅಂದ್ರೆ ಸ್ಟಾರ್ .


ಸಿನಿಮಾಗಳೇ. ನಾವು ಕೂಡ ಬೇರೆ ಭಾಷೆ ಸಿನಿಮಾಗಳನ್ನ ನೋಡೋದು ಯಾವಾಗ ಅಲ್ಲಿನ ದೊಡ್ಡ ಸ್ಟಾರ್ ಸಿನಿಮಾ ಮಾಡಿದಾಗ ಹಾಗಾಗಿ ನಮ್ಮ ದೊಡ್ಡ ಮುಖಗಳು ಕಮ್ಮಿ ಆಗ್ತಾ ಹೋದ್ರೆ ಅದರ ಎಫೆಕ್ಟ್ ನಮ್ಮ ಕೆಎಫ್ಐ ನ ಐಡೆಂಟಿಟಿ ಮೇಲೆ ಖಂಡಿತವಾಗಲೂ ಬೀಳುತ್ತೆ. ಮತ್ತೆ ಇನ್ನೊಂದು ದೊಡ್ಡ ನೋವು ಕೂಡ ಇದೆ ಗುರುವೇ ಕಳೆದ 10 ವರ್ಷಗಳಲ್ಲಿ ಕನ್ನಡದಲ್ಲಿ ಹೊಸ ದೊಡ್ಡ ಸ್ಟಾರ್ ಯಾರು ಹುಟ್ಟಿದ್ದಾರೆ ಸ್ವಲ್ಪ ಯೋಚನೆ ಮಾಡಿ ಹೆಸರು ಹೇಳೋದು ಕಷ್ಟನೆ ಯಾಕೆ ಯಾಕಂದ್ರೆ ಹಿಂದಿನ ಡೈರೆಕ್ಟರ್ಸ್ಗೆ ಒಂದು ಶಕ್ತಿ ಇರ್ತಾ ಇತ್ತು ಗುರುವೇ ಸಾಧಾರಣ ನಟನನ್ನು ಕೂಡ ಸ್ಟಾರ್ ಮಾಡುವಂತಹ ಶಕ್ತಿ ಪುಟ್ಟಣ್ಣ ಕಣಗಾಲ್ ಮಾಡ್ತಾ ಇದ್ರು ರಾಜೇಂದ್ರ ಸಿಂಗ್ ಬಾಬು ಅವರು ಮಾಡಿದ್ರು ಯೋಗರಾಜ್ ಭಟ್ಟ ತರದ ಮೇಕರ್ಸ್ .


ಒಂದು ಜನರೇಶನ್ಗೆ ಹೊಸ ಮುಖ ಹೊಸ ಸ್ಟಾರ್ಸ್ ನ್ನ ಕೊಟ್ಟರು ಅವರು ಕೇವಲ ಸಿನಿಮಾಗಳನ್ನ ಮಾಡಿಲ್ಲ ಸ್ಟಾರ್ಸ್ ಗಳನ್ನ ಸೃಷ್ಟಿ ಮಾಡಿದ್ರು ಇವತ್ತು ಆ ಶಕ್ತಿ ಯಾರಿಗಾದ್ರೂ ಇದೆ ಅಂತ ಅಂತ ತಟ್ಟ ಅಂತ ಹೇಳೋದಕ್ಕೆ ನನ್ನ ಬಾಯಲ್ಲಿ ಉತ್ತರಾಣೆ ಇಲ್ಲ ಗುರುವೇ ನಾನು ಮಾಡ್ತೀನಿ ನಾನು ರಿಸ್ಕ್ ತಗೊಳ್ತೀನಿ ನಾನು ಹೊಸ ಸ್ಟಾರ್ಸ್ ನ್ನ ಬಿಲ್ಡ್ ಮಾಡ್ತೀನಿ ಅಂತ ಹೇಳೋರು ಯಾರಿದ್ದಾರೆ ನಮ್ಮಲ್ಲಿ ಯಾರು ಒಬ್ಬರಿಂದ ಇಬ್ಬರಿಂದ ಬದಲಾವಣೆಗಳು ಆಗೋದಿಲ್ಲ ಎಲ್ಲರೂ ಒಟ್ಟಿಗೆ ಬಂದು ಕರೆಂಟ್ಲಿ ಆಗಿರುವಂತಹ ಪ್ರಾಬ್ಲಮ್ಗಳ ಕುರಿತು ಚರ್ಚೆ ಮಾಡಿ ಸೊಲ್ಯೂಷನ್ ನ ಹುಟ್ಟಿಸಬೇಕು ಯಾರಾದ್ರೂ ಫ್ಯಾಮಿಲಿ ಆಡಿಯನ್ಸ್ ನ ಮತ್ತೆ ಥಿಯೇಟರ್ಗೆ ಕರ್ಕೊಂಡು ಬರಬೇಕು .

ಯಾರಾದ್ರೂ ಪ್ರತಿ ತಿಂಗಳು ಒಳ್ಳೆ ಕನ್ನಡ ಸಿನಿಮಾಗಳು ಥಿಯೇಟರ್ನಲ್ಲಿ ಬರುವಂತಹ ಪರಿಸ್ಥಿತಿನ ಕ್ರಿಯೇಟ್ ಮಾಡಬೇಕು ಇವತ್ತು ಕನ್ನಡ ಚಿತ್ರರಂಗಕ್ಕೆ ಸಮಸ್ಯೆಗಳು ಇರಬಹುದು ಅಲ್ಲಲ್ಲಿ ಕಷ್ಟಗಳು ಇರಬಹುದು ಬಟ್ ಅದಕ್ಕೂ ಮಿಗಿಲಾದ ಸಮಸ್ಯೆ ಅಂದರೆ ಖಾಲಿತನ ಥಿಯೇಟರ್ಸ್ ನಲ್ಲಿ ಖಾಲಿತನ ರಿಲೀಸಸ್ ಕ್ಯಾಲೆಂಡರ್ನಲ್ಲಿ ಖಾಲಿತನ ಸ್ಟಾರ್ಸ್ ಗಳ ಪವರ್ನಲ್ಲಿ ಖಾಲಿತನ ಸ್ಟಾರ್ ಪವರ್ಸ್ ಇಲ್ಲದೆ ಇರುವಂತಹ ಖಾಲಿತನ ಈ ಖಾಲಿತನದಿಂದಲೇ ಒಂದು ಸಂಭ್ರಮ ಕಾಣೆ ಆಗುತ್ತೆ ಒಂದು ಸಂಸ್ಕೃತಿನೇ ಕಾಣೆ ಆಗಿಬಿಡುತ್ತಲ್ವಾ ಆ ಗದ್ದಲ ಗಲಾಟೆ ಸಂಭ್ರಮ ಎಲ್ಲ ಮತ್ತೆ ಬರಬೇಕು ಆ ಸಂಭ್ರಮ ಮತ್ತೆ ಶುರುವಾಗಬೇಕು .

ಯಾಕಂದ್ರೆ ಕನ್ನಡ ಚಿತ್ರರಂಗಕ್ಕೆ ಇವತ್ತಿಗೂ ಪ್ರತಿಭೆಗಳಿದಾವೆ ಕಥೆಗಳಿದವೆ ಪ್ರೇಕ್ಷಕರಿದ್ದಾರೆ ಆದರೆ ಅವೆಲ್ಲ ಒಟ್ಟಾಗಿ ಬರಬೇಕಲ್ವಾ ಬೇಕಾಗಿರೋದು ಕನ್ಸಿಸ್ಟೆನ್ಸಿ ಸ್ಟಾರ್ಸ್ ಮಾತ್ರ ಅಂತ ಅಲ್ಲ ಒಳ್ಳೆ ಒಳ್ಳೆ ಕಂಟೆಂಟ್ ಯಾರು ತಂದ್ರುನು ಅದು ಸಕ್ಸೆಸ್ ಆಗೆ ಆಗುತ್ತೆ ಕಂಟೆಂಟ್ ಬಗ್ಗೆ ಹೈ ಪುಟ್ಟಿಸಬೇಕು ಅಬ್ಸೆಷನ್ ಅಂತಹ ಸಿನಿಮಾ ಯಾಕಷ್ಟು ಸಕ್ಸಸ್ಫುಲ್ ಆಯ್ತು ಅಂತಂದ್ರೆ ಅದು ಕ್ರಿಯೇಟ್ ಮಾಡಿದಂತಹ ವೈರಾಲಿಟಿ ಸೋಶಿಯಲ್ ಮೀಡಿಯಾನ ಅವರು ಬಳಸಿಕೊಂಡಂತಹ ವಿಧಾನ ಒಂದು ಮಾಸ್ಟರ್ ಕ್ಲಾಸ್ ಈ ಸೋಶಿಯಲ್ ಮೀಡಿಯಾ ಹೈಪ್ ಇಲ್ಲ ಅಂದಿದ್ರೆ ಜನರ ಮಧ್ಯೆ ವರ್ಲ್ಡ್ ಆಫ್ ಮೌತ್ ಇಲ್ಲ ಅಂತ ಅಂದಿದ್ರೆ ಆ ಸಿನಿಮಾ ಕೂಡ ಎಲ್ಲೋ ಕಳೆದು ಹೋಗ್ತಾ ಇತ್ತಲ್ವಾ ಇದಾಗಿತ್ತು ಸ್ಟಾರ್ಸ್ ಗಳು ಕಾಣೆ ಆಗಿದ್ದಾರೆ.

 ಅನ್ನೋದರ ಮೇಲಿನ ನಮ್ಮ ಟಿಪ್ಪಣಿ ನಿಮಗೆ ಇದೆಲ್ಲದರ ಬಗ್ಗೆ ಏನ ಅನ್ಸುತ್ತೆ ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ಮುಂದೊಂದು ದಿನ ಎಲ್ಲವೂ ಮತ್ತೆ ಚೇತರಿಕೆ ಆಗಲಿ ಕನ್ನಡ ಚಿತ್ರರಂಗ ಮತ್ತೆ ರಾರಾಜಿಸಲಿ ಸೈನಿಂಗ್ ಆಫ್ ಮನು


Post a Comment

0Comments

Post a Comment (0)
To Top