Ramayana Trailer Delay Explained: Facts, Reasons & Future Plans | Yash | Ranbir Kapoor

NS CREATION FF
0


 ನೆನ್ನೆ ನಾವೆಲ್ಲರೂ ಒಂದು ವಿಷಯದ ಬಗ್ಗೆ ಕಾಯ್ತಾ ಇದ್ವಿ ಎಸ್ ರಾಮಾಯಣ ಸಿನಿಮಾದ ಟ್ರೈಲರ್ ಕೈಯಲ್ಲಿ ಮೊಬೈಲ್ ಇಡ್ಕೊಂಡು ಪದೇ ಪದೇ YouTube ಪೇಜ್ನ ರಿಫ್ರೆಶ್ ಮಾಡ್ಕೊಂಡು ಇನ್ನೇನು ಬಂತು ಈಗೆ ಬಂತು ಅಂತ ಕೂತಿದ್ದೆ ನಿಮಗೂ ಹಾಗೆ ಆಗಿದಾ ರಿಲೀಸ್ ಆಗ್ಬೇಕು ಅನ್ನುವಂತ ಟೈಮ್ಗೆ ಕೆಲವೇ ಕೆಲವು ನಿಮಿಷಗಳು ಇರಬೇಕಾದ್ರೆ ದಿಡೀರ ಅಂತ ಒಂದು ಶಾಕಿಂಗ್ ನ್ಯೂಸ್ ಬರುತ್ತೆ ಟ್ರೈಲರ್ ಪ್ರಸಾರ ಲಾಸ್ಟ್ ಮಿನಿಟ್ ಅಲ್ಲಿ ಕ್ಯಾನ್ಸಲ್ ಮಾಡಿದ್ರು .

ಏನ್ ಗುರು ಇದು ಇಷ್ಟು ದಿನ ಕಾಯಿಸಿ ಕೊನೆಗಳಿಗೆಲ್ಲಿ ಈ ತರ ಮಾಡಿದ್ರೆ ಅಭಿಮಾನಿಗಳಿಗೆ ಕೋಪ ಬರಲ್ವಾ ನನಗೂ ಅದೇ ಅನಿಸ್ತು ಈ ಡಿಸಿಷನ್ ನ ಹಿಂದೆ ಇರುವಂತಹ ಅಸಲಿ ಕಾರಣ ಕೇಳಿದ್ರೆ ನಿಮ್ಮ ಕೋಪ ಎಲ್ಲ ಮಾಯ ಆಗಿ ಖುಷಿಯಾಗುತ್ತೆ ಹೌದು ಇದು.


ಕೆಟ್ಟ ಸುದ್ದಿ ಅಲ್ಲ ಮೊದಲಿಗೆ ನಮ್ಮ ಭಾರತೀಯ ಚಿತ್ರಂಗದ ಮಟ್ಟಿಗೆ ಒಂದು ಬಿಗ್ಗೆಸ್ಟ್ ಬ್ರೇಕಿಂಗ್ ನ್ಯೂಸ್ ಅದೇನು ಅಂತ  ,

 ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ಸೋನಿ ಪಿಕ್ಚರ್ಸ್ ಎಸ್ ಹಾಲಿವುಡ್ ನ ದೊಡ್ಡ ದೊಡ್ಡ ಸಿನಿಮಾಗಳನ್ನ ಪ್ರಪಂಚದಾದ್ಯಂತ ರಿಲೀಸ್ ಮಾಡುವಂತಹ ಅದೇ ಸೋನಿ ಸ್ಟುಡಿಯೋ ಈಗ ರಾಮಾಯಣ ತಂಡದ ಜೊತೆಗೆ ಒಂದು ಬೃಹತ್ ಜಾಗತಿಕ ಒಪ್ಪಂದ ಗ್ಲೋಬಲ್ ಡೀಲ್ ಅನ್ನ ಸೈನ್ ಮಾಡಿದೆ. ಇದರ ಅರ್ಥ ಏನು ಗೊತ್ತಾ ಇನ್ಮುಂದೆ ಈ ಪೌರಾಣಿಕ ಮಹಾಕಾವ್ಯದ ಅಂತರಾಷ್ಟ್ರೀಯ ಡಿಸ್ಟ್ರಿಬ್ಯೂಷನ್ ಜವಾಬ್ದಾರಿನ ಸೋನಿ ಸಂಸ್ಥೆ ವಹಿಸಿಕೊಳ್ಳಲಿದೆ ಅಂತ ಸುಮ್ನೆ ಯೋಚನೆ ಮಾಡಿ. ನಮ್ಮ ಭಾರತದ ಕಥೆ


ನಮ್ಮ ರಾಮಾಯಣನ ಜಗತ್ತಿನ ಮೂಲೆ ಮೂಲೆಗೆ ತಲುಪಿಸುವದಕ್ಕೆ ಒಂದು ಹಾಲಿವುಡ್ ಲೆವೆಲ್ನ ಸ್ಟುಡಿಯೋ ಕೈಜೋಡಿಸಿದೆ ಭಾರತೀಯ ಚಿತ್ರಂಗದ ಇತಿಹಾಸದಲ್ಲೇ ಹಿಂದೆಂದು ಕಾಣದ ಮಟ್ಟದ ಪ್ರಮೋಷನ್ ಮತ್ತು ಮಾರ್ಕೆಟಿಂಗ್ ಇನ್ಮುಂದೆ ಶುರುವಾಗುತ್ತೆ. ಇಷ್ಟು ದೊಡ್ಡ ಡೀಲ್ ಆದಾಗ ಟ್ರೈಲರ್ ನ ನಾರ್ಮಲ್ ಆಗಿ ರಿಲೀಸ್ ಮಾಡೋದಕ್ಕೆ ಆಗಲ್ಲ. ಜಾಗತಿಕ ಮಾರ್ಕೆಟಿಂಗ್ ಮಾನದಂಡಗಳಿಗೆ ಅಂದ್ರೆ ಇಂಟರ್ನ್ಯಾಷನಲ್ ಮಾರ್ಕೆಟಿಂಗ್ ಸ್ಟ್ಯಾಂಡರ್ಡ್ಸ್ ಗೆ ತಕ್ಕಂತೆ ಟ್ರೈಲರ್ ಲಾಂಚ್ ಟೈಮ್ ಅನ್ನ ಬದಲಾಯಿಸಬೇಕಾಯಿತು. ಸೋನಿ ಜೊತೆಗಿನ ಈ ಕಾರ್ಯತಂತ್ರದ ಪಾಲುದಾರಿಕೆ ಸ್ಟ್ರಾಟಜಿಕ್ ಪಾರ್ಟ್ನರ್ಶಿಪ್ ನಿಜಕ್ಕೂ ಒಂದು ಗೇಮ್ ಚೇಂಜರ್ ಇದೆಲ್ಲದರ ಹಿಂದೆ ಇರೋದು ಇಬ್ಬರು ಮಾಸ್ಟರ್


ಮೈಂಡ್ಸ್ ಗಳು ಒಬ್ಬರು ನಮ್ಮ ರಾಕಿಂಗ್ ಸ್ಟಾರ್ ಯಶ್ ಇನ್ನೊಬ್ಬರು ನಮಿತ್ ಮಲೋದ್ರ ನಮಗೆಲ್ಲ ಗೊತ್ತಿರೋ ಹಾಗೆ ಯಶ್ ಅವರು ಈ ಸಿನಿಮಾದಲ್ಲಿ ಬರಿ ಆಕ್ಟ್ ಮಾಡ್ತಾ ಇಲ್ಲ ಅವರು ಈ ಚಿತ್ರದ ಒನ್ ಆಫ್ ದ ಮೇನ್ ಪ್ರೊಡ್ಯೂಸರ್ .ಕೂಡ ಹೌದು ಕೆಜಿಎಫ್ ಆದಮೇಲೆ ಯಶ್ ಅವರ ವಿಷನ್ ಎಷ್ಟರ ಮಟ್ಟಿಗೆ ಬದಲಾಗಿದೆ ಅನ್ನೋದಕ್ಕೆ ಈ ಡೀಲ್ ಒಂದು ಬೆಸ್ಟ್ ಎಕ್ಸಾಂಪಲ್ ಯಶ್ ಮತ್ತು ನಮಿತ್ ಅವರ ಗುರಿ ಬರಿ ಇಂಡಿಯಾದಲ್ಲಿ ಅಥವಾ ಕೇವಲ ಭಾರತೀಯ ಮೂಲದವರನ್ನ ಮಾತ್ರ ತಲುಪೋದಲ್ಲ ಪ್ರಪಂಚದಾದ್ಯಂತ ಇರೋ ಪ್ರತಿಯೊಬ್ಬ ಪ್ರೇಕ್ಷಕನಿಗೂ ಈ ಸಿನಿಮಾ ತಲುಪಬೇಕು ಅನ್ನೋದು ಅವರ ಪ್ಲಾನ್ ಈ ಕ್ರಮದಿಂದ ರಾಮಾಯಣ ಕೇವಲ ಒಂದು ಸಿನಿಮಾ ಆಗಿ ಉಳಿಯಲ್ಲ .ಅದೊಂದು ಗ್ಲೋಬಲ್ ಫ್ರಾಂಚೈಸಿಯಾಗಿ ಬೆಳೆಯಲಿದೆ.


ಅಂತ ಟ್ರೇಡ್ ಪಂಡಿತರು ಈಗ ಲೆಕ್ಕಾಚಾರ ಹಾಕಿದ್ದಾರೆ ಯಶ್ ಅವರ ಡೆಡಿಕೇಶನ್ ಹೇಗಿದೆ ಅಂದ್ರೆ ನಮ್ಮ ಕಥೆನ ಹಾಲಿವುಡ್ ರೇಂಜ್ ಅಲ್ಲಿ ಜಗತ್ತಿಗೆ ತೋರಿಸಬೇಕು ಅಂತ ಪಣ ತೊಟ್ಟಿದ್ದಾರೆ ಸೋನಿ ಸಂಸ್ಥೆಯ ಎಂಟ್ರಿಯಿಂದ ಚಿತ್ರದ ತಾಂತ್ರಿಕ ಮತ್ತು ದೃಶ್ಯ ವೈಭವಕ್ಕೆ ಆನೆಬಲ ಬಂದಂತಾಗಿದೆ ಸರಿ ಡೀಲ್ ಏನೋ ಆಯ್ತು ಆದರೆ ರೆಡಿಯಾಗಿದಂತಹ ಟ್ರೈಲರ್ ಯಾಕೆ ಬಿಡಲಿಲ್ಲ ಅದಕ್ಕೂ ಒಂದು ಸಾಲಿಡ್ ರೀಸನ್ ಇದೆ ನಿರ್ಮಾಪಕರು ಆಫಿಷಿಯಲ್ ಆಗಿ ಒಂದು ಅನೌನ್ಸ್ಮೆಂಟ್ ಕೊಟ್ಟಿದ್ದಾರೆ ಅದೇನಪ್ಪಾ ಅಂದ್ರೆ ಈಗ ಟ್ರೈಲರ್ ನಲ್ಲಿ ಗ್ಲೋಬಲ್ ಬ್ರಾಂಡಿಂಗ್ ಸೋನಿ ಲೋಗೋಸ್ ಮತ್ತು ಕೆಲವು ಇಂಟರ್ನ್ಯಾಷನಲ್ ಕಟ್ಸ್ ಸೇರಿಸಲು ತಂಡ ರಿ ಎಡಿಟಿಂಗ್ ಮಾಡ್ತಾ ಇದೆ.

 ವಿಶ್ವದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ತಲುಪಬೇಕು ಅಂದಾಗ ಕ್ವಾಲಿಟಿಲಿ ಯಾವುದೇ ಕಾಂಪ್ರಮೈಸ್ ಆಗಬಾರದು ಅದಕ್ಕೆ ಈ ಸಣ್ಣ ವಿಳಂಬ ಅನಿವಾರ್ಯ ಅಂತ ಚಿತ್ರತಂಡ ಹೇಳ್ಕೊಂಡಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನು ಅಂದ್ರೆ ಐಮ್ಯಾಕ್ಸ್ 3D, ಐಮ್ಯಾಕ್ಸ್ 3D ಎಕ್ಸ್ಪೀರಿಯನ್ಸ್. ಹೌದು, ಈ ಸಿನಿಮಾನ ಪಕ್ಕಾ ಐಮ್ಯಾಕ್ಸ್ 3D ಫಾರ್ಮ್ಯಾಟ್ ಗೆ ಟಾರ್ಗೆಟ್ ಮಾಡಿ ಮಾಡ್ತಾ ಇದ್ದಾರೆ. ಆ ಪಾತ್ರಗಳ ವಿನ್ಯಾಸ, ಕ್ಯಾರೆಕ್ಟರ್ ಡಿಸೈನ್, ಆ ಸೆಟ್ಸ್, ಆ ದೃಶ್ಯ ವೈಭವನ ಬಿಗ್ ಸ್ಕ್ರೀನ್ ಮೇಲೆ ನೋಡೋದಕ್ಕೆ ಎರಡು ಕಣ್ಣು ಸಾಲಲ್ಲ ಅಂತ ಇನ್ಸೈಡ್ ರಿಪೋರ್ಟ್ ಹೇಳ್ತಾ ಇದೆ. 

ಈ ಎಲ್ಲಾ ಗ್ಲೋಬಲ್ ಟಚ್ ಕೊಡೋದಕ್ಕೆ ಟ್ರೈಲರ್ ನಲ್ಲಿ ಸಣ್ಣ ಬದಲಾವಣೆ ಮಾಡ್ತಾ ಇದ್ದಾರೆ. ಟ್ರೈಲರ್ ಬಿಡುಗಡೆಯ ಹೊಸ ಟೈಮ್ ಅನ್ನ ಈ ವೀಕೆಂಡ್ ಒಳಗಡೆ ಅನೌನ್ಸ್ ಮಾಡುವಂತಹ ಸಾಧ್ಯತೆ ಜೋರಾಗಿದೆ. ಇನ್ನು ನಮ್ಮ ಕರ್ನಾಟಕದ ವಿಚಾರಕ್ಕೆ ಬರೋಣ. ನಮ್ಮ ಯಶ್ ಅವರು ಈ ಪ್ರಾಜೆಕ್ಟ್ ಅಲ್ಲಿ ಇನ್ವಾಲ್ವ್ ಆಗಿರೋದ್ರಿಂದ ಕರ್ನಾಟಕದಲ್ಲಿ ಈ ಚಿತ್ರದ ಬಗ್ಗೆ ಇರುವಂತಹ ಕ್ರೇಜ ಅಷ್ಟಿಷ್ಟಲ್ಲ. ಎಲ್ಲರಿಗೂ ಇದ್ದಿದ್ದ ದೊಡ್ಡ ಪ್ರಶ್ನೆ ಕನ್ನಡದ ಡಬ್ಬಿಂಗ್ ಹೇಗಿರುತ್ತೆ ಅಂತ. ಆದರೆ ಈಗ ಬಂದಿರುವಂತಹ ರಿಪೋರ್ಟ್ಸ್ ಪ್ರಕಾರ ಕನ್ನಡಿಗರಿಗೆ ಒಂದು ಗುಡ್ ನ್ಯೂಸ್ ಇದೆ. ಸಿನಿಮಾ ನೇರವಾಗಿ ಕನ್ನಡದಲ್ಲೂ ಏಕಕಾಲಕ್ಕೆ ರಿಲೀಸ್ ಆಗ್ತಿದೆ. ಡಬ್ಬಿಂಗ್ ಕ್ವಾಲಿಟಿ ಬಗ್ಗೆ ನೀವು ತಲೆ ಕೆಡಿಸಿಕೊಳ್ಳೋ ಹಾಗೆ ಇಲ್ಲ. 

ಯಾಕಂದ್ರೆ ಪ್ರೊಡಕ್ಷನ್ ಲೆವೆಲ್ ನಲ್ಲಿ ಎಷ್ಟಿದ್ದಾರೆ ಅಂತ ಅಂದ್ಮೇಲೆ ಅಲ್ಲಿ ಹೈ ಕ್ವಾಲಿಟಿ ಪಕ್ಕ ಇದ್ದೇ ಇರುತ್ತೆ. ಅದಕ್ಕಿಂತ ದೊಡ್ಡ ಖುಷಿಯ ವಿಚಾರ ಏನಂದ್ರೆ ಸೋನಿ ಅವರ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಮೂಲಕ ನಮ್ಮ ಕನ್ನಡದ ಆವೃತ್ತಿ ಕನ್ನಡದ ವರ್ಷನ್ ಕೂಡ ಜಾಗತಿಕ ಮಟ್ಟದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತೆ ಅಂದ್ರೆ ಅಮೆರಿಕಾ ಯುರೋಪ್ನಂತಹ ಕಡೆಗಳಲ್ಲೂ ಕನ್ನಡದ ವರ್ಷನ್ ಸ್ಕ್ರೀನಿಂಗ್ ಆಗುತ್ತೆ. ದಕ್ಷಿಣ ಭಾರತದ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಭರವಸೆ ಇನ್ನೇನು ಬೇಕು ಹೇಳಿ ನಮ್ಮ ಭಾರತದ ಕಥೆ ನಮ್ಮ ನಟನ ಮುಂದಾಳತದಲ್ಲಿ ನಮ್ಮ ಭಾಷೆಯಲ್ಲೂ ಜಗತ್ತನ್ನ ಆಳೋದಕ್ಕೆ ರೆಡಿಯಾಗಿದೆ. ಒಟ್ಟನಲ್ಲಿ ಹೇಳಬೇಕು ಅಂದ್ರೆ ನೆನ್ನೆ ಟ್ರೈಲರ್ ಮುಂದುಡಿಕೆ ಆಗಿದ್ದು ನಮಗೆಲ್ಲ ಸ್ವಲ್ಪ ಬೇಜಾರಾಗಿದ್ರು ಈಗ ಅದರ ಹಿಂದೆ ಇರುವಂತಹ ಕಾರಣ ಕೇಳಿ ಸಿನಿಮಾ.


ಪ್ರೇಮಿಗಳ ಕುತೂಹಲ 100 ಪಟ್ಟು ಹೆಚ್ಚಾಗಿರುತ್ತೆ. ಸೋನಿ ಜೊತೆಗಿನ ಈ ಒಪ್ಪಂದ ಭಾರತೀಯ ಕಥೆ ಹೇಳುವಿಕೆಯಲ್ಲಿ ಇಂಡಿಯನ್ ಸ್ಟೋರಿ ಟೆಲ್ಲಿಂಗ್ ಫಾರ್ಮ್ಯಾಟ್ ಅಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಅನ್ನೋದರಲ್ಲಿ ಡೌಟೇ ಇಲ್ಲ.

\


Post a Comment

0Comments

Post a Comment (0)
To Top