ANA NAYAGAN Movie Review 🔥 | Thalapathy Vijay’s BLOCKBUSTER or FLOP?

NS CREATION FF
0



 ಜನನಾಯಕನ್ ಇದು ಹೆಚ್ ವಿನೋದ್ ಅವರು ಡೈರೆಕ್ಟ್ ಮಾಡಿರುವಂತಹ ಸಿನಿಮಾ ಇದು ತಮಿಳುನಾಡಿನ ಹಾಲಿ ಮುಖ್ಯಮಂತ್ರಿಗಳಾಗಿರುವಂತಹ ತಳಪತಿ ವಿಜಯ್ ಅವರ ಕೊನೆಯ ಸಿನಿಮಾ ಕೂಡ ಹೌದು. ಸಿನಿಮಾ ಜನವರಿ ಒಂಬತಕ್ಕೆ ಅದ್ದೂರಿಯಾಗಿ ಬಿಡುಗಡೆ ಆಗುವಂತಹ ಪ್ಲಾನ್ ನ್ನ ಮಾಡಿಕೊಂಡಿತ್ತು. ಬಟ್ ಸೆನ್ಸಾರ್ ಬೋರ್ಡ್ ಇಂದ ಆದಂತಹ ಗೊಂದಲ ಗಲಬೆಗಳಿಂದಾಗಿ ಇದರ ರಿಲೀಸ್ ಬರೋಬ್ಬರಿ ಏಳು ತಿಂಗಳು ಡಿಲೇ ಆಗಿದೆ. ಅವರು ಎಲೆಕ್ಷನ್ನಲ್ಲಿ ಜಯಿಸಿ ಮುಖ್ಯಮಂತ್ರಿಗಳಾದ ಮೇಲೆನೇ ಸಿನಿಮಾ ತೆರೆ ಕಾಣಬೇಕು ಅನ್ನೋದನ್ನ ಆ ಭಗವಂತನೇ ಡಿಸೈಡ್ ಮಾಡಿದ್ದ ಅಂತ ಕಾಣುತ್ತೆ. ಎನಿವೇಸ್ ಇವತ್ತು ಈ ಸಿನಿಮಾ ನೋಡಿದ ನಮಗೆ ಏನ ಅನ್ನಿಸ್ತು ಏನೆಲ್ಲಾ ಇಷ್ಟ ಆಯ್ತು ಏನೆಲ್ಲ ಕಷ್ಟ ಕೊಡ್ತು ಎಲ್ಲವನ್ನ.

 ಈ ರಿವ್ಯೂಲ್ಲಿ ಹೇಳ್ತೀನಿ ಬನ್ನಿ ನೋಡ್ಕೊಂಡು ಬರೋಣ ಹಾಯ್ ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ನಾವು ಮಾಡುವಂತಹ ರಿವ್ಯೂ ನಿಮಗೆ ಇಷ್ಟ ಆಗೋದಾದ್ರೆ

ನಮ್ಮ ಮುಖ್ಯ ಪಾತ್ರದಾರಿಯ ಹೆಸರು ತಲಪತಿ ವೆಟ್ರಿಕೊಂಡನ್ ಅಕ್ಕ ಟಿವಿಕೆ ಇವರಿಗೆ ಇರೋದು ಒಂದೇ ಕನಸು ತನ್ನ ಮಗಳಾದ ವಿಜಿ ಒಳ್ಳೆ ಟ್ರೈನಿಂಗ್ ಪಡ್ಕೊಂಡು ಮಿಲಿಟರಿ ಸೇರಬೇಕು ಅನ್ನೋದು ಬಟ್ ವಿಜಿ ಚಿಕ್ಕವಳಿದ್ದಾಗ ಅವಳ ಬದುಕಲ್ಲಿ ನಡೆದಂತಹ ಒಂದು ಘಟನೆಯ ಟ್ರಾಮಾ ಇಂದ ಇನ್ನು ಅವಳು ಕಂಪ್ಲೀಟ್ ಆಗಿ ಆಚೆ ಬಂದಿರಲ್ಲ ಸೋ ನಮ್ಮ ಟಿವಿಕೆ ತನ್ನ ಮಗಳನ್ನ ಅದರಹತ್ರ ಹೇಗೆ ಮೋಟಿವೇಟ್ ಮಾಡಿದ ,

ಈ ಜರ್ನಿಯಲ್ಲಿ ಅವನ ಹಳೆ  ದುಶ್ಮನ್ಗಳು ಎಂಟ್ರಿ ಕೊಟ್ಟಾಗ ಏನೆಲ್ಲ ಚಾಲೆಂಜಸ್ ಗಳು ಅವನ ಮುಂದೆ ಎದುರಾದವು ಅನ್ನೋದೇ ಸಿನಿಮಾದ ಪ್ಲಾಟ್ ಇಲ್ಲಿ ನನಗೆ ಮೊದಲು ಕಿಕ್ ಕೊಟ್ಟಿದ್ದು ಅಂತಂದ್ರೆ ವಿಜಯ್ ಅವರ ಪ್ರೆಸೆನ್ಸ್ ಅನ್ನ ಬಳಸಿಕೊಂಡಿರುವಂತಹ ರೀತಿ ಒಳ್ಳೆ ಪರ್ಫಾರ್ಮರ್ ಆಗೋದರ ಜೊತೆಗೆ ಅವರಿಗೆ ನ್ಯಾಚುರಲಿ ಒಂದು ಸ್ವಾಗ್ ಇದೆ ಅವರದೇ ಆದಂತಹ ಒಂದು ಮ್ಯಾನರಿಸಂ ಇದೆ. ಸೋ ಆ ಎಲ್ಲಾ ಎಲಿಮೆಂಟ್ಸ್ ನ್ನ ಒಟ್ಟಾಗಿ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ ಅಂಡ್ ಫ್ಯಾನ್ ಸರ್ವಿಸ್ ಮೂಮೆಂಟ್ಸ್ ಗಳು ಲೆಕ್ಕವಿಲ್ಲದಷ್ಟು ಬರ್ತಾನೆ ಇರ್ತವೆ. ಆ ಪ್ಯಾಕೆಡ್ ಥಿಯೇಟರ್ ಅಲ್ಲಿ ಇದನ್ನ ನೋಡುವಾಗ ಆ ಅನುಭವ ಒಂದು ಪಟ್ಟು ಎನ್ಹಾನ್ಸ್ ಆಗುತ್ತೆ ಅಂತಾನೆ ಹೇಳ್ತೀನಿ. 

ವಿಜಯ್ ಅವರ ಫ್ಯಾನ್ಸ್ಏನನ್ನ ಕೇಳ್ತಾರೆ ವಿಜಯ್ ಅವರ ಸ್ಟ್ರೆಂತ್ಸ್ ಏನು ಹೀಗೆ ಹಲವು ಫ್ಯಾಕ್ಟರ್ಸ್ ನ ಹೆಚ್ ವಿನೋದ್ ಅವರು ಚೆನ್ನಾಗಿ ಅರ್ಥ ಮಾಡಿಕೊಂಡು ಆ ಎಲಿಮೆಂಟ್ಸ್ ನ ಫ್ಯಾನ್ ಸರ್ವಿಸ್ ಗೋಸ್ಕರ ಬಳಸಿಕೊಂಡಿದ್ದಾರೆ. ಅಂಡ್ ಆತರದ ಸೀಕ್ವೆನ್ಸಸ್ ಮತ್ತೆ ಮತ್ತೆ ಬರೋತರನೇ ಕಥೆಯನ್ನ ಸ್ಟಿಚ್ ಕೂಡ ಮಾಡಿದ್ದಾರೆ ಅಂತ ಹೇಳಬಹುದು. ತಲಪತಿ ಕಚೇರಿ ಎಂಬ ಹಾಡಿನಲ್ಲಂತೂ ಅವರ ಎನರ್ಜಿ ಸಕತ್ತಾಗಿತ್ತು. ಇರೋ ಬರೋ ಎನರ್ಜಿನೆಲ್ಲ ಯುಟಿಲೈಸ್ ಮಾಡ್ಕೊಂಡಿದ್ದಾರೆ ಅಂಡ್ ಈ ಸಾಂಗ್ ಸಿನಿಮಾದ ದೊಡ್ಡ ಹೈಲೈಟ್ ಕೂಡ ಹೌದು. ಇಲ್ಲಿ ವಿಜಯ್ ಅವರು ಅರ್ಧ ಸಿನಿಮಾನ ಕ್ಯಾರಿ ಮಾಡ್ತಾ ಇದ್ದರೆ ಇನ್ನು ಉಳಿದ ಪಾರ್ಟ್ಸ್ ನಲ್ಲಿ ಬೆಂಕಿ ಹಚ್ಚಿರೋದು.

 ಅನಿರುದ್ಧ ಅವರ ಬ್ಯಾಕ್ಗ್ರೌಂಡ್ ಸ್ಸೀನ್ಸ್ ಗಳನ್ನ ಏನಪ್ಪಾ ಕಥೆ ಸ್ಟಕ್ ಆಗಿದೆಯಲ್ಲ ಅನ್ನುವಂತಹ ಮೂಮೆಂಟ್ಸ್ ನಲ್ಲಿ ಅನಿರುದ್ಧ ಅವರ ಸ್ಕೋರ್ ಸಿನಿಮಾನ ಬೇರೆಬಲ್ ಮಾಡಿದೆ ಅಂತ ಹೇಳ್ತೀನಿ. ಇನ್ನು ಇಲ್ಲಿನ ಆಕ್ಷನ್ ಆಗಲಿ ಕೆಲವೊಂದು ಕೌಂಟರ್ಸ್ ಆಗ್ಲಿ ವಿಜಯ್ ಅವರ ಜೋನ್ ನಲ್ಲೇ ಇತ್ತು ಅಂಡ್ ಅದೆಲ್ಲ ಚೆನ್ನಾಗಿ ಲ್ಯಾಂಡ್ ಆಯ್ತು ಅಂತ ಹೇಳಬಹುದು. ಇನ್ನು ಕೆಬಿಎನ್ ಪ್ರೊಡಕ್ಷನ್ಸ್ ಅವರ ಪ್ರಾಡಕ್ಟ್ ಆದಂತಹ ಈ ಸಿನಿಮಾ ವಿಶುವಲಿ ಸಿಕ್ಕಪಟ್ಟೆ ಗ್ರಾಂಡ್ ಆಗಿದೆ. ಪೋರ್ಟ್ನಲ್ಲಿ ಬರುವಂತಹ ಆಕ್ಷನ್ ಸೀನ್ಸ್ ಫೈರ್ ಫೈಟ್ ಸೀನು ಹೀಗೆ ದೊಡ್ಡ ಸ್ಕೇಲ್ನಲ್ಲೇ ಸಿನಿಮಾ ಮೂಡ್ ಬಂದಿದೆ ಅಂತ ಹೇಳಬಹುದು. ಸಿನಿಮಾದ ಮೊದಲನೇ ಅರ್ಧ ತೀರ ವೇಗವಾಗಿ ಸಾಗುತ್ತೆ. 

ಕಥೆಯಲ್ಲಿ ಬರುವಂತಹ ಪಾತ್ರಗಳನ್ನ ನಮಗೆ ಪರಿಚಯಿಸ್ತಾ ಒಳ್ಳೆ ಪೇಸ್ನ ಮೇಂಟೈನ್ ಮಾಡ್ತಾರೆ. ಬಟ್ ಸಿನಿಮಾದ ಎರಡನೇ ಅರ್ಧ ಕಂಪ್ಲೀಟ್ಲಿ ಒಂದು ಪೊಲಿಟಿಕಲ್ ಡ್ರಾಮಾ ಅಂತಾನೆ ಹೇಳಬಹುದು ಅಲ್ಲಿದ್ದ ಎಲಿಮೆಂಟ್ಸ್ ಅಂಡ್ ಅಲ್ಲಿ ಪ್ಲೇಸ್ ಮಾಡಿದಂತಹ ಟಾಕಿ ಪೋರ್ಷನ್ಸ್ ತಮಿಳುನಾಡಿನ ಈ ವರ್ಷದ ಅಸೆಂಬ್ಲಿ ಎಲೆಕ್ಷನ್ಸ್ ನ ದೃಷ್ಟಿಯಲ್ಲಿ ಇಟ್ಕೊಂಡೆ ಮಾಡಿರೋದು ಅನ್ನೋದು ಕ್ಲಿಯರ್ ಆಗಿ ಗೊತ್ತಾಗುತ್ತೆ. ಬಟ್ ಎನಿವೇಸ್ ಸಿನಿಮಾಗೆ ಏ ರೇಟಿಂಗ್ ಯಾಕೆ ಬಂತು ಅನ್ನೋದು ಒಂದು ದೊಡ್ಡ ಮಿಸ್ಟರಿ. ಇನ್ನು ಮೇನ್ ವಿಲನ್ ಆಗಿ ಕಾಣಿಸಿಕೊಂಡಿರೋದು ಬಾಬಿ ಡ್ಯುಯಲ್ ಅವರು ಒಳ್ಳೆ ಪ್ರೆಸೆನ್ಸ್ ಅನ್ನ ತಂದಿದ್ದಾರೆ .

ಆದರೆ ಅವರ ಪಾತ್ರವನ್ನ ಇನ್ನಷ್ಟು ಲಾಜಿಕಲಿ ಬ್ಯಾಲೆನ್ಸ್ಡ್ ಆಗಿ ಇಡಬಹುದಿತ್ತು ಬಟ್ ಇದ್ದಷ್ಟು ಟೈಮ್ ತಮ್ಮ ನ್ಸ್ ನ ಮೇಂಟೈನ್ ಮಾಡ್ತಾರೆ ಅಂತ ಹೇಳಬಹುದು. ಮಮಿತಾ ಬೈಜೋ ಅವರ ಕಡೆಯಿಂದ ಒಳ್ಳೆ ಪರ್ಫಾರ್ಮೆನ್ಸ್ ಬಂದಿದೆ. ವಿಜಯ್ ಅವರನ್ನ ಬಿಟ್ಟರೆ ಒಂದು ಕಂಪ್ಲೀಟ್ ಕ್ಯಾರೆಕ್ಟರ್ ಆರ್ಕ್ ಅಂತ ಇರೋದು ಇವರ ಪಾತ್ರಕ್ಕೆ ಮಾತ್ರ. ಸೋ ಅದನ್ನ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ. ಇನ್ನು ಇಲ್ಲಿ ಏನೇನು ಬೆಟರ್ ಆಗಬಹುದಿತ್ತು ಅಂತ ನೋಡೋದಾದ್ರೆ ಇಲ್ಲಿನ ಸೂಪರ್ಫಿಷಿಯಲ್ ರೈಟಿಂಗ್ ಇಲ್ಲಿನ ಕಥೆ ಹೊಸದಲ್ಲ ಅದನ್ನ ಹೇಳಿರುವಂತಹ ರೀತಿ ಕೂಡ ಹೊಸದಲ್ಲ ನಾವು ಈ ಹಿಂದೆನೆ ಎಷ್ಟೋ ಸಲಿ ನೋಡಿರುವಂತಹ ಪಾತ್ರಗಳ ಬರವಣಿಗೆನೆ ಇಲ್ಲೂ ಇದೆ ಅಲ್ಲಿದ್ದ ಕಾನ್ಫ್ಲಿಕ್ಟ್ಸ್ ಯಾವುದು ಹೊಸದಲ್ಲ ಅಂಡ್ ಟು ಬಿ ಹನೆಸ್ಟ್ ಇಲ್ಲಿ ಹೊಸದಾಗಿ ಏನೋ ಸಿಗುತ್ತೆ ಅನ್ನುವಂತಹ ನಿರೀಕ್ಷೆ ನಾನು ಮಾಡಿರಲಿಲ್ಲ .

ಸೋ ಇದನ್ನ ಒಂದು ಮೇಜರ್ ಡ್ರಾ ಬ್ಯಾಕ್ ಅಂತ ಕನ್ಸಿಡರ್ ಮಾಡಕ್ಕೆ ಆಗಲ್ಲ ಇನ್ನು ಪ್ರಾಬ್ಲಮ್ಾಟಿಕ್ ಅಂತ ನನಗೆ ಅನ್ಸಿದ್ದು ವಿಜಯ್ ಅವರ ಹಾಗೂ ಪೂಜಾ ಹೆಗಡೆ ಅವರ ಪೇರಿಂಗ್ ಪೂಜಾ ಹೆಗಡೆ ಅವರನ್ನ ಬರೀ ಸಾಂಗ್ಸ್ ಅಂಡ್ ಹೀರೋಗೆ ಎಲಿವೇಷನ್ ಕೊಡೋದಕ್ಕೆ ಅಂತಾನೆ ಬಳಸಿಕೊಂಡಂಗಿದೆ. ಅಲ್ಲಿ ಒಳ್ಳೆ ರೋಲ್ ಅಂತ ಇಲ್ಲ. ಅವರ ನಡುವಿನ ಕೆಮಿಸ್ಟ್ರಿ ಕೂಡ ಅಲ್ಲಲ್ಲಿ ಫೇಕ್ ಅಂತ ಅನ್ಸೋದಕ್ಕೆ ಶುರುವಾಗುತ್ತೆ. ಒನ್ ಆಫ್ ದ ಮೋಸ್ಟ್ ಲವಡ್ ಸ್ಟಾರ್ ನ ಕೊನೆಯ ಸಿನಿಮಾ ಅಂತ ಅಂದ್ಮೇಲೆ ಅಲ್ಲಿ ಖಂಡಿತವಾಗ್ಲೂ ಫ್ಯಾನ್ ಸರ್ವಿಸ್ ಮೋಮೆಂಟ್ಸ್ ಗಳು ತುಂಬಿರ್ತವೆ. ಬಟ್ ಇಡೀ ಸಿನಿಮಾದಲ್ಲಿ ಆ ಹೊಸತನದ ಕೊರತೆ ಕಾಣಿಸ್ತಾ ಇತ್ತು.

 ದಟ್ ಕುಡ್ ಹಾವ್ ಬೀನ್ ಬೆಟರ್. ಕಡಕ್ಸಿ ನಿಮಾದ ಪ್ರಕಾರ ವಿಜಯ್ ಅವರ ಅಭಿಮಾನಿ ನೀವಾಗಿದ್ರೆ ಅಥವಾ ಅವರ ಪ್ರೆಸೆನ್ಸ್ ಅನ್ನ ಎಂಜಾಯ್ ಮಾಡೋರು ನೀವಾಗಿದ್ರೆ ಈ ಸಿನಿಮಾ ನಿಮಗೆ ಇಷ್ಟ ಆಗಬಹುದು. ಬಟ್ ಆಸ್ ಎ ನ್ಯೂಟ್ರಲ್ ಆಡಿಯನ್ಸ್ ಈ ಸಿನಿಮಾ ನೋಡೋದಕ್ಕೆ ಹೋಗ್ತೀನಿ ಅನ್ನೋರು ನೀವಾಗಿದ್ರೆ ಈ ಸಿನಿಮಾ ಒಂದು ಡೀಸೆಂಟ್ ವಾಚ್ ತುಂಬಾ ದೊಡ್ಡದಾಗಿ ಆಫರ್ ಮಾಡುತ್ತೆ ಅನ್ನುವಂತಹ ನಿರೀಕ್ಷೆಗಳನ್ನ ಇಟ್ಕೊಳ್ಳೋದಕ್ಕಿಂತ ಒಂದು ಕಮರ್ಷಿಯಲ್ ಟೆಂಪ್ಲೇಟ್ ಸಿನಿಮಾ ಅಂತ ಅನ್ಕೊಂಡು ಹೋಗೋದು .ಒಳ್ಳೇದು ಇದಾಗಿತ್ತು ಜನನಾಯಕನ್ ಸಿನಿಮಾದ ರಿವ್ಯೂ ನೀವು ಈ ಸಿನಿಮಾನ ಆಲ್ರೆಡಿ ನೋಡಿದ್ರೆ ನಿಮಗೆ ಹೇಗೆ ಅನಿಸ್ತು ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ ಸೈನಿಂಗ್ ಆಫ್ ಮನು.



Post a Comment

0Comments

Post a Comment (0)
To Top