MOTHER PROMISE Review | ದಾಳಿ ಧನಂಜಯ್ ಸಿನಿಮಾ ಹೇಗಿದೆ? 😱 | Hit or Flop? | ಕನ್ನಡ Review

NS CREATION FF
0


 ಮದರ್ ಪ್ರಾಮಿಸ್ ಇತ್ತೀಚೆಗೆ ಒಂದು ಒಳ್ಳೆ ಹೈಪ್ ಕ್ರಿಯೇಟ್ ಮಾಡಿರುವಂತಹ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಂದಿರುವಂತಹ ಡಾಲಿ ಧನಂಜಯ ಅಂಡ್ ಟೀಮ್ ನಡೆಸಿರುವಂತಹ ಮದರ್ ಪ್ರಾಮಿಸ್ ಇವತ್ತು ರಾಜ್ಯದಂತ ರಿಲೀಸ್ ಆಗಿದೆ ಕೆಲವು ಸಿನಿಮಾಗಳು ನೋಡಾದಮೇಲೆ ತಲೆ ಕೆಡಿಸಿಕೊಳ್ಳೋ ಹಾಗೆ ಮಾಡುತ್ತೆ ಇನ್ನು ಕೆಲವು ಸಿನಿಮಾಗಳು ತಲೆ ಕೆಡಿಸಿಕೊಳ್ಳೋದಕ್ಕೆ ಚಾನ್ಸ್ ಕೊಡದೆ ಸಿನಿಮಾನ ನೋಡಿಸಿಕೊಂಡು ಹೋಗುತ್ತೆ ಮದರ್ ಪ್ರಾಮಿಸ್ ಮುಂಚೆ ಹೇಳಿರುವಂತಹ ಎರಡನೇ ಕ್ಯಾಟಗರಿಯ ಸಿನಿಮಾ ಪೂರ್ಣಚಂದ್ರ ಮೈಸೂರು ಡೈರೆಕ್ಟ್ ಮಾಡಿರುವಂತಹ ಈ ಸಿನಿಮಾ ಒಂದು ಗ್ಯಾಂಗ್ಸ್ಟರ್ ಕಾಮಿಡಿ ಡ್ರಾಮಾ ಜಾನರ್ಗೆ ಸೇರುವಂತಹ ಸಿನಿಮಾ ಆಗಿದ್ದು ಸಿನಿಮಾ ಹೇಗಿದೆ ಎಲ್ಲೆಲ್ಲಿ ಪ್ರಾಮಿಸ್ ನ್ನ ಉಳಿಸಿಕೊಂಡ್ರು ಎಲ್ಲೆಲ್ಲಿ ಅದು ಬ್ರೇಕ್ ಆಯ್ತು. ಎಲ್ಲವನ್ನ ಈ ರಿವ್ಯೂಲ್ಲ್ಲಿ ಹೇಳ್ತೀನಿ ಬನ್ನಿ. .

 ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ನಮ್ಮ ಬೆಂಗಳೂರು ಬ್ಯಾಕ್ಡ್ರಾಪ್ ನಲ್ಲೇ ನಡೆಯುವಂತಹ ಕಥೆ ಇದು ಆದ್ರೆ ಕಂಪ್ಲೀಟ್ಲಿ ಫಿಕ್ಷನಲ್ ಇಲ್ಲಿ ಲಾಜಿಕ್ ಗಿಂತ ಜಾಸ್ತಿ ಸಿಚುಯೇಷನಲ್ ಕಾಮಿಡಿ ಅನ್ನುವಂತಹ ಮ್ಯಾಜಿಕ್ ಮೇಲೆ ಬೆಟ್ ಮಾಡಿದ್ದಾರೆ.

 ಪ್ರೊಡಗನಿಸ್ಟ್ ರಾಂಡಿ ಒಬ್ಬ ಗ್ಯಾಂಬ್ಲರ್ ಒಂದೆಲ್ಲ ಒಂದು ದಿನ ಲಕ್ ಕುಲಾಯಿಸುತ್ತೆ ಅಂತ ಆಡೋದಕ್ಕೆ ಹೋಗಿ ಇರೋ ಬರೋದನ್ನೆಲ್ಲ ಕಳ್ಕೊಂಡು ಕಂಗಾಲಾಗಿ ನಿಲ್ತಾನೆ ಜೀವ ಉಳಿಸಿಕೊಳ್ಳೋದಕ್ಕೆ ಓಡೋದಕ್ಕೆ ಶುರು ಮಾಡ್ತಾನೆ .

ಟ್ವಿಸ್ಟ್ ಏನಪ್ಪ ಅಂದ್ರೆ ಇವನು ಓಡ್ತಾ ಇರೋದು ಬರೀ ಲೋಕಲ್. ಸಾಲಗಾರರಿಂದ ಅಲ್ಲ ಸಿಟಿಯ ಇಬ್ಬರು ದೊಡ್ಡ ಡಾನ್ ಗಳಿಂದ ಈ ಎಲ್ಲಾ ಗೊಂದಲಗಳ ಮಧ್ಯೆ ಎಷ್ಟೇ ದೊಡ್ಡ ರೌಡಿ ಆದ್ರೂ ಅಮ್ಮನ ಆಣೆ ಮದರ್ ಪ್ರಾಮಿಸ್ ಅಂದ್ರೆ ಅದನ್ನ ಹೇಗೆ ಗೌರವಿಸುತ್ತಾನೆ ಆ ಪ್ರಾಮಿಸ್ ಇಡೀ ಕನ್ಫ್ಯೂಷನ್ ಡ್ರಾಮಾವನ್ನ ಎಲ್ಲೆಲ್ಲಿಗೆ ತಗೊಂಡು ಹೋಗುತ್ತೆ ಅನ್ನೋದೇ ಈ ಸಿನಿಮಾದ ಕ್ರೇಜಿ ಪ್ಲಾಟ್ ಇಲ್ಲಿ ಕ್ಯಾರೆಕ್ಟರ್ಸ್ ಗಳದೇ ಹಬ್ಬ ಈ ಸಿನಿಮಾದಲ್ಲಿ ಯಾರೋ ಒಬ್ಬ ಹೀರೋ ಅಂತ ಇಲ್ಲವೇ ಇಲ್ಲ ಗುರುವೇ ಡಾಲಿ ಧನಂಜಯ್ ಅವರು ಸಿನಿಮಾದಲ್ಲಿದ್ದಾರೆ . ಆದರೆ ಅವರು ಫುಲ್ ಪ್ರೆಡ್ಜ್ ಹೀರೋ ಅಲ್ಲ ಅವರಿಗೆ ಸಿಗದು 30 ನಿಮಿಷದ ಸ್ಪೆಷಲ್ ಪ್ರೆಸೆನ್ಸ್ ಮಾತ್ರ ಬಟ್ ಇಡೀ ಸಿನಿಮಾವನ್ನ ಅಚ್ಚಕಟ್ಟಾಗಿ ನಿಲ್ಿಸೋದು ಉಳಿದ ಪೋಷಕ ನಟರು ಸಿನಿಮಾದ ಫಸ್ಟ್ ಹಾಫ್ ಸ್ವಲ್ಪ ಸ್ಲೋ ಆಗಿ ಸ್ಟಾರ್ಟ್ ಆದ್ರು ಒಮ್ಮೆ ಮಂಡ್ಯಾದಿಂದ ಮೂರು ಕ್ಯಾರೆಕ್ಟರ್ಗಳ ಎಂಟ್ರಿ ಆಗುತ್ತಲ್ಲ,

 ಅಲ್ಲಿಂದ ಸಿನಿಮಾ ಒಂದು ಒಳ್ಳೆ ವೈವನ್ನ ತಗೊಳ್ಳುತ್ತೆ ಮಂಡ್ಯಾ ಬೆಂಗಳೂರು ಮಂಗಳೂರು ಮತ್ತು ಉತ್ತರ ಕರ್ನಾಟಕದ ವಿಭಿನ್ನ ಲಹರಿಗಳ ಮಿಕ್ಸ್ ಈ ಕಾಮಿಡಿ ರೈಡ್ ಅಲ್ಲಿ ಚೆನ್ನಾಗಿ ಬ್ಲೆಂಡ್ ಆಗಿದೆ. ಸಿನಿಮಾದ ಫಸ್ಟ್ ಹಾಫ್ ಸ್ವಲ್ಪ ಎಳೆದಿದ್ದಾರೆ ಅಂತ ಖಂಡಿತ ಅನ್ಸುತ್ತೆ ಅಯ್ಯೋ ಇಷ್ಟೇನಾ ಅನ್ನುವಂತಹ ಫೀಲಿಂಗ್ ನ್ನ ಕೂಡ ಅಲ್ಲಲ್ಲಿ ಹುಡಿಸೋದು ಸುಳ್ಳಲ್ಲ ಕ್ಯಾರೆಕ್ಟರ್ ಸೆಟ್ಪ್ ಮಾಡೋದಕ್ಕೆ ಫಸ್ಟ್ ಹಾಫ್ ನಲ್ಲಿ ತುಂಬಾ ತುಂಬಾ ಟೈಮ್ ತಗೊಂಡಿದ್ದಾರೆ ಮೂವಿ ಯಾವ ಜಾನರ್ಗೆ ಹೋಗ್ತಾ ಇದೆ ಅಂತ ಕನೆಕ್ಟ್ ಮಾಡ್ಕೊಳ್ಳೋದಕ್ಕೆ ಆಡಿಯನ್ಸ್ ಗೆ ಸ್ವಲ್ಪ ಟೈಮ್ ಬೇಕಾಗುತ್ತೆ ಬಟ್.


ಸೆಕೆಂಡ್ ಹಾಫ್ ಅಲ್ಲಿ ಅದಕ್ಕೆ ಪೇ ಆಫ್ ಸಿಗುತ್ತೆ ಅಂಡ್ ಸಿನಿಮಾದ ಗ್ರಾಫ್ ಮಜವಾದ ಕಾಮಿಡಿ ಸನ್ನಿವೇಶಗಳಿಂದ ಸೆಕೆಂಡ್ ಹಾಫ್ ಅಲ್ಲಿ ಅದು ಅಪ್ಲಿಫ್ಟ್ ಆಗುತ್ತೆ ಮಹದೇವ್ ಪ್ರಸಾದ್ ಅವರು ಮಾಡಿರುವಂತಹ ದೊನ್ನೆ ಬಿರಿಯಾನಿ ಅನ್ನುವಂತಹ ಕ್ಯಾರೆಕ್ಟರ್ ಚೆನ್ನಾಗಿದೆ ಅವರ ಜೊತೆಗೆ ಮ್ಯಾಗಿಯಾಗಿ ಗುರುದತ್ ಇಲ್ಲಿ ಇಂಪ್ರೆಸ್ ಮಾಡ್ತಾರೆ. ಯಶ್ವಂತ್ ಅರುಣ್ ಬ್ರಹ್ಮಣ್ಣನವರ್ ಶ್ರೀವತ್ಸ ಎಲ್ಲರೂ ಈ ಫನ್ ರೈಡ್ಗೆ ಒಳ್ಳೆ ಕಾಂಟ್ರಿಬ್ಯೂಷನ್ ಅನ್ನ ಕೊಟ್ಟಿದ್ದಾರೆ , ಸಿನಿಮಟೋಗ್ರಾಫರ್ ಅಂಡ್ ಎಡಿಟರ್ಸ್ ತಮ್ಮ ಕೆಲಸ ವನ್ನ ಇಲ್ಲಿ ಇದ್ದಂತಹ ಬೌಂಡ್ರಿಲ್ಲಿ ಅಚ್ಚಕಟ್ಟಾಗಿ ನಿಭಾಯಿಸಿದ್ದಾರೆ, ಅಮ್ಮನಾಗಿ ಗೀತಾ ಮತ್ತು ವಿನಯ ಪ್ರಸಾದ್ ಅವರು ಕಾಣಿಸಿಕೊಂಡಿದ್ದಾರೆ ಮದರ್ ಪ್ರಾಮಿಸ್


ಅನ್ನುವಂತಹ ಟೈಟಲ್ ಇದ್ದ ಕಾರಣ ಅಮ್ಮ ಮಗನ ಮಧ್ಯೆ ಇರುವಂತಹ ಎಮೋಷನಲ್ ಕನೆಕ್ಟ್ ಇಲ್ಲಿ ಇನ್ನಷ್ಟು ಸ್ಟ್ರಾಂಗ್ ಆಗಿ ನಾನು ಎಕ್ಸ್ಪೆಕ್ಟ್ ಮಾಡಿದ್ದೆ .ಬಟ್ ಅದು ಇಲ್ಲಿ ಡೀಸೆಂಟ್ ಆಗಿ ವರ್ಕ್ ಆಗಿದೆ ನವನೀತ್ ಶಾಮ ಅವರ ಮ್ಯೂಸಿಕ್ ಸಿನಿಮಾದ ಕ್ರೇಜಿ ಮೂಡ್ಗೆ ಪಕ್ಕಾ ಮ್ಯಾಚ್ ಆಗುತ್ತೆ. ಆ ಚೇಸಿಂಗ್ ಸೀಕ್ವೆನ್ಸ್ ಗಳಲ್ಲಂತೂ ಬಿಜಿಎಂ ಸೂಪರ್ ಆಗಿ ಸಪೋರ್ಟ್ ಮಾಡುತ್ತೆ ಸಿನಿಮಾದಲ್ಲಿದ್ದ ನಾಲಕು ಹಾಡುಗಳು ಕೂಡ ಥಿಯೇಟರ್ಲ್ಲಿ ಒಳ್ಳೆ ಮಜಾ ಕೊಡುತ್ತೆ ಅಂಡ್ ಆಚೆ ಬಂದಮೇಲೆ ಗುನುಗು ಹಾಗೂ ಮಾಡುತ್ತೆ. ಡೈರೆಕ್ಟರ್ ಆಗಿ ಪೂರ್ಣಚಂದ್ರ ಅವರದು ಇದು ಡೆಬ್ಯೂ ಸಿನಿಮಾ ಅಂಡ್ ಮೊದಲ ಸಿನಿಮಾದಲ್ಲೇ ಈ ತರದ ಜಾನರ್ನ ಆರಿಸಿಕೊಳ್ಳೋದಕ್ಕೆ ಗಡಿಸಬೇಕು.


ಅವರಿಗೆ ಇಲ್ಲಿ ಅವರ ನೀಡಿಯನ್ಸ್ ಯಾರು ಅನ್ನುವಂತಹ ಕ್ಲಾರಿಟಿ ಇದ್ದಾಗಿತ್ತು. ಸೋ ಸಿನಿಮಾದ ಟೋನ್ ಅನ್ನ ಸ್ಟಾರ್ಟ್ ಟು ಎಂಡ್ ಹಾಗೆ ಮೈಂಟೈನ್ ಮಾಡಿದ್ದಾರೆ. ಈ ಡೇರಿಂಗ್ ಅಟೆಂಪ್ಟ್ ಕನ್ನಡದಲ್ಲಿ ಹೊಸದು ಅಂತ ಹೇಳಬಹುದು. ಬಟ್ ಜಾತಿರತ್ನಾಲು, ಆವೇಶಂ ಡಿಜೆ ಟಿಲ್ಲು ಈ ಸಿನಿಮಾಗಳು ಮೈಂಡ್ಲೆಸ್ ಮ್ಯಾಡ್ ಕ್ಯಾಪ್ ಕಾಮಿಡಿ ಅಂದಾನೆ ಫೇಮಸ್ ಆಗಿ ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆ ಹೆಸರನ್ನ ಕೂಡ ಮಾಡಿದ್ವು. ಇದು ಕೂಡ ಅದೇ ಕ್ಯಾಟಗರಿಗೆ ಸೇರುವಂತಹ ಸಿನಿಮಾ ಬನಶಂಕರಿ ಬೀಚು, ಬೆಂಗಳೂರಲ್ಲಿ ಇರುವಂತಹ ಕೆಸಿನೋ, ಸಪ್ತಸಾಗರದ ರೆಫರೆನ್ಸ್, ಸ್ಪ್ಲೆಂಡರ್ ಬೈಕ್ ಅಲ್ಲಿ ಕಾಂಪಿಟೇಷನ್ ಗೆ ಇದ್ದಿರುವಂತಹ ಬ್ಯಾಕ್ಡ್ರೋಬ್ ಇಬ್ಬರು ಡಾನ್ಗಳ ಮಧ್ಯೆ ಇರುವಂತಹ ಗೆರೆ .

ಈತರ ಸುಮಾರು ವಿಷಯಗಳನ್ನ ಹೀಗೇನೇ ಸೆಟ್ ಮಾಡ್ತಾ ಹೋಗಿದ್ದಾರೆ ಸಿನಿಮಾ ಉದ್ದಕ್ಕು ಇಲ್ಲಿ ಲಾಜಿಕ್ಸ್ ಅನ್ನ ಹುಡುಕೋನಿಗೆ ಡಿಸ್ಪಾಯಿಂಟ್ ಆಗಬಹುದು .

ಹಾಗೆ ಈ ಫಾರ್ಮ್ ಆಫ್ ಎಂಟರ್ಟೈನ್ಮೆಂಟ್ ಅನ್ನ ಇಷ್ಟ ಪಡೋರಿಗೆ ಇದು ನಗಿಸೋದು ಗ್ಯಾರೆಂಟಿ ಕಡಕ್ಕಾಗಿ ಹೇಳೋದಾದ್ರೆ ಬ್ರೈನ್ ನ ಜಾಸ್ತಿ ಯೂಸ್ ಮಾಡದೆ ಟೆನ್ಶನ್ ತಗೊಳ್ದೆ ಲಾಜಿಕ್ ಅನ್ನುವಂತಹ ಯೋಚನೆನ ಬಿಟ್ಟು ಈ ಸಿನಿಮಾ ನೋಡಿದ್ರೆ ಇದು ನಿಮ್ಮನ್ನ ನಗಿಸುತ್ತೆ ವಿತ್ ಸಮ್ ಗುಡ್ ಪರ್ಫಾರ್ಮೆನ್ಸಸ್ ಈ ಜಾನರಲ್ಲಿ ಸಿನಿಮಾ ಬಂದಿರೋದು ಬಹುಶಃ ಕನ್ನಡದಲ್ಲಿ ತುಂಬಾನೇ ಕಮ್ಮಿ ಹಾಗಾಗಿ ಇದನ್ನ ಕನ್ನಡಕ್ಕೆ ಹೊಸದು ಅಂತ ಕೂಡ ಹೇಳಬಹುದು ಇದಾಗಿತ್ತು ಮದರ್ ಪ್ರಾಮಿಸ್ ಸಿನಿಮಾದ ರಿವ್ಯೂ ನೀವೇನಾದ್ರೂ ಸಿನಿಮಾ ನೋಡಿದ್ರೆ ನಿಮಗೆ ಹೇಗೆ ಅನಿಸ್ತು ಅಂತ ಕಾಮೆಂಟ್ ಮಾಡಿ ತಿಳಿಸಿ ಸೈನಿಂಗ್ ಆಫ್ ಮನು.


Post a Comment

0Comments

Post a Comment (0)
To Top