ಕೈಯಲ್ಲಿ ಇಂತ ಒಳ್ಳೆ ಪ್ರಾಡಕ್ಟ್ ಅನ್ನ ಇಟ್ಕೊಂಡು ಅದನ್ನ ಪ್ರಮೋಟ್ ಮಾಡೋ ಸಂದರ್ಭದಲ್ಲಿ ಇಷ್ಟು ಕೆಟ್ಟದಾಗಿ ಅವಾಂತರನ ಸೃಷ್ಟಿ ಮಾಡಿಕೊಳ್ಳೋದು ಅಂದ್ರೆ ಏನು ಹೇಳ್ಬೇಕೋ ಗೊತ್ತಿಲ್ಲ ಬಟ್ ಲಿಟರಲಿ ಅನ್ಫಾರ್ಚುನೇಟ್ ಇದು ಆಲ್ರೆಡಿ ಇಂಡಸ್ಟ್ರಿ ಪರಿಸ್ಥಿತಿ ಹದುಗೆಟ್ಟು ಹೋಗಿದೆ ಅಂತದ್ರಲ್ಲಿ ಮಧ್ಯ ಎಲ್ಲೋ ಒಂದು ಕಡೆ ಒಳ್ಳೆ ಸಿನಿಮಾ ಒಂದು ಭರವಸೆ ಅನ್ನೋಷ್ಟರಲ್ಲೇ ಹೀಗೆ ಹಾಳು ಮಾಡಿಕೊಳ್ಳೋದ ಛ ಡೆಫಿನೆಟ್ಲಿ ಸರಿಯಲ್ಲ ಇದು ಸೀ ಪ್ರತಿಯೊಬ್ಬ ನಟನಿಗೂ ಅವನದ್ದೇ ಆದ ಬೆಲೆ ಇದೆ ಆ ಗೌರವನ ಕೊಡಲೇಬೇಕು ರೆಮುನರೇಷನ್ ಅದು ಇದು ಎಲ್ಲ ಬಿಟ್ಟುಹಾಕಿ ಬಟ್ ಹೇಳಿರೋ ರೀತಿ ನಡೆಸಿಕೊಂಡಿಲ್ಲ ಮೊದಲಿಗೆ ಸೇರಿಕೊಂಡವರನೇ ಸೈಡ್ಲೈನ್ ಮಾಡಿ ಸಿನಿಮಾನ ತರೋದು ಅಂದ್ರೆ ಅದು
ಖಂಡಿತವಾಗ್ಲೂ ಒಳ್ಳೆ ಬೆಳವಣಿಗೆ ಅಲ್ಲವೇ ಅಲ್ಲ ಎನಿವೇಸ್ ಈ ಕಾಂಟ್ರವರ್ಸಿ ಬಗ್ಗೆ ಡೀಟೇಲ್ಡ್ ಆಗಿ ಇನ್ನೊಂದು ವಿಡಿಯೋದಲ್ಲೇ ಮಾತಾಡೋಣ ಬಟ್ ರೈಟ್ ನೌ ಆಸ್ ಎ ಸಿನಿಮಾ ಎಂಗೇಜಿಂಗ್ ಅಂಡ್ ಅಷ್ಟೇ ಇಂಟರೆಸ್ಟಿಂಗ್ ಆಗಿರೋ ಟ್ರೈಲರ್ ಇದು ನಾನಂತೂ ಹೆವಿ ಅಂದ್ರೆ ಹೆವಿ ಎಕ್ಸೈಟೆಡ್ ಆಗಿ ಕಾಯ್ತಾ ಇದೀನಿ ಸಿನಿಮಾಗೋಸ್ಕರ ಕರಾವಳಿ ಇದು ಗುರುದತ್ತ ಗಾಣಿಗ ಅವರು ಡೈರೆಕ್ಟ್ ಮಾಡ್ತಾ ಇರುವಂತ ಚಿತ್ರ ಇದೆ ಜುಲೈ 24ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಾ ಇದೆ ಇನ್ನು ನೆನ್ನೆ ಇದರ ಟ್ರೈಲರ್ ಕೂಡ ಬಿಡುಗಡೆ ಆಗಿತ್ತು ಬಟ್ ನನಗೆ ಸಮಯ ಸಿಕ್ಕಿರಲಿಲ್ಲ ಸಿಕ್ಕಾಪಟ್ಟೆ ಲೇಟ್ ಆಗಿದೆ ಆಲ್ರೆಡಿ ಇನ್ನ ಟೈಮ್ ವೇಸ್ಟ್ ಮಾಡೋದು ಬೇಡ ಬನ್ನಿ ಬನ್ನಿ ಅದರ ಬಗ್ಗೆ
ಮಾತಾಡಿಕೊಂಡು ಬರೋಣ ಆದ್ರೆ ಅದಕ್ಕಿಂತ ಮುಂಚೆ ಚಾನೆಲ್ ಗೆ ಹೊಸಬರಾಗಿದ್ರೆ ಸಬ್ಸ್ಕ್ರೈಬ್ ಮಾಡ್ಕೊಳ್ಳಿ ಅಂಡ್ ವಿಡಿಯೋ ಇಷ್ಟ ಆಯ್ತು ಅಂದ್ರೆ ಖಂಡಿತ ಒಂದು ಲೈಕ್ ಕೊಟ್ಟು ಸಪೋರ್ಟ್ ಮಾಡಿ ಟೈಟಲ್ೇ ಹೇಳ್ತಿರೋ ಹಾಗೆ ಈ ಕಥೆ ನಡೀತಾ ಇರೋದು ಕರಾವಳಿ ಭಾಗದಲ್ಲಿ ಸ್ಪೆಸಿಫಿಕಲ್ಲಿ ಅಲ್ಲಿನ ಜನ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿರೋ ಕಂಬಳ ಕ್ರೀಡೆಯ ಸುತ್ತ ಮುತ್ತ ಕೋಣಗಳು ಹುಟ್ಟಿದ್ದು ಕುಲುಗುಂದದಲ್ಲಿ ಆದರೆ ಈಗ ಅದರ ಕಿಚ್ಚು ಹರಡಿರೋದು ಇಡೀ ಕರಾವಳಿಯ ತುಂಬ ಅಂಡ್ ಇವೆರಡರ ಮಧ್ಯೆ ದ್ವೇಷ ಪೈಪೋಟಿ ಹೊಡದಾಟ ಅಸೂಯೆ ಎಲ್ಲ ಒಂದು ಕುರ್ಚಿಗೋಸ್ಕರ ಸೋ ಇದರ ಪ್ರಕಾರ ಹೋದ್ರೆ ಕರಾವಳಿ ಜನರಿಗೆ ಕಂಬಳ ಒಂದು ಪ್ರತಿಷ್ಠೆ ಆ ಪ್ರತಿಷ್ಠೆನ ತನ್ನದಾಗಿಸಿಕೊಳ್ಳೋದಕ್ಕೆ ನೋಡ್ತಾ
ಇರೋ ಹಲವು ಜನ ಆದರೆ ರೆಗ್ಯುಲರ್ ಆಗಿ ಈ ಕೋಟಿ ಚೆನ್ನಯ್ಯ ಕಂಬಳನ ಗೆಲ್ತಾ ಬರ್ತಿರೋದು ಒಬ್ಬನೇ ಒಬ್ಬ ಅಂಡ್ ಅದೇ ಆ ಊರಿನ ದಣಿ ಹಾಗೆ ಈ ಪಾತ್ರನ ಮಾಡ್ತಾ ಇರೋದು ರಮೇಶ್ ಇಂದಿರಾ ಅವರು ಇನ್ನು ಕಂಬಳಕ್ಕೆ ಬಳಸೋ ಕೋಣಗಳನ್ನ ಬ್ರೀಡ್ ಮಾಡಿ ಅದನ್ನ ಪಳಗಿಸೋದಕ್ಕೆ ಅಂತಾನೆ ಇಲ್ಲೊಬ್ಬ ಟ್ರೈನರ್ ಇದ್ದಾನೆ ಅಂಡ್ ಆ ಪಾತ್ರನ ಮಾಡ್ತಾ ಇರೋದು ಮಿತ್ರ ಅವರು ವರ್ಷಗಳಿಂದ ಜೆನೆಟಿಕಲಿ ಸುಪೀರಿಯರ್ ಆಗಿರೋ ಕೋಣಗಳನ್ನ ದಣಿಗಳಿಗೆ ಸಪ್ಲೈ ಮಾಡ್ತಾ ಟೆಕ್ನಿಕಲ್ ಆಗಿ ಅಥವಾ ಅನ್ಫೇರ್ ಆಗಿನೇ ದಣಿ ಕೋಣಗಳನ್ನ ಗೆಲಿಸ್ತಾ ಬಂದಿರ್ತಾನೆ ಅಂಡ್ ಆಕ್ಚುಲಿ ಸಿಕ್ಕಾಪಟ್ಟೆ ಡಾಮಿನೇಟ್ ಮಾಡಿರ್ತಾರೆ ಈ ಜೋಡಿ ಕಂಬಳನ ಇನ್ನು ಹೀಗಿರುವಾಗಲೇ .
ಈ ಸ್ಪರ್ಧೆಗೆ ಎಂಟ್ರಿ ಕೊಡೋದು ಮಹಾವೀರ ಐ ಮೀನ್ ರಾಜ್ಬಿ ಶೆಟ್ಟಿ ಅವರ ಪಾತ್ರ ಇವನಿಗೆ ಮನುಷ್ಯರಿಗಿಂತ ಬರೀ ಕೋಣಗಳ ಕಡೆ ನ್ಯಾಯ ಸೆಳೆತ ಜಾಸ್ತಿ ಇನ್ಫ್ಯಾಕ್ಟ್ ಮದುವೆ ಆಗಬೇಕಾಗಿರೋ ಹುಡುಗಿ ಬಗ್ಗೆನು ಅಷ್ಟಾಗಿ ಗಮನ ಇಲ್ಲ ಸೋ ಕೋಣಗಳ ವಿಷಯದಲ್ಲೇ ಮುಳುಗಿ ಹೋಗಿರೋ ಇವನು ಅವುಗಳ ಜೊತೆನೆ ಇದ್ದು ಅದರ ಬಗ್ಗೆ ತಿಳ್ಕೊಂಡು ಹೆವಿ ಸ್ಟ್ರಾಟಜಿನ ಯೂಸ್ ಮಾಡಿ ಒಂದು ಸಲ ದಣಿಗಳ ಕೋಣಗಳನ್ನ ಸೋಲಿಸೆ ಬಿಡ್ತಾನೆ ಅಂಡ್ ಅಲ್ಲಿಂದ ಶುರುವಾಗುತ್ತೆ ನೋಡಿ ಕಾನ್ಫ್ಲಿಕ್ಟ್ ಬರೋಬರಿ 30 ವರ್ಷ ಕಂಬಳನೆ ನಡೆಯೋದಿಲ್ಲ ಸೀ ಇಲ್ಲಿ ಟೈಮ್ ಲೈನ್ ಸಿಕ್ಕಾಪಟ್ಟೆ ಇಂಪಾರ್ಟೆಂಟ್ ಆಗುತ್ತೆ. ಬಿಕಾಸ್ ಟ್ರೈಲರ್ ಕಟ್ಟಿರೋ ವಿಶುವಲ್ಸ್ ನೋಡಿದ್ರೆ ರಾಜ್ ಅವರು ಮತ್ತೆ ಪ್ರಜ್ವಲ್ ಅವರು ಯಾವ ಫ್ರೇಮ್ ನಲ್ಲೂ ಒಟ್ಟಿಗೆ ಇರೋದಿಲ್ಲ.
ಸೋ ಮೋಸ್ಟ್ಲಿ ಅವರಿಬ್ಬರು ಈ 30 ವರ್ಷದ ಡಿಫರೆನ್ಸ್ ಅಲ್ಲಿ ಸಪರೇಟ್ ಆಗಿರಬಹುದಾ ಗೊತ್ತಿಲ್ಲ ಬಟ್ ಇವರಿಬ್ಬರು ಮಧ್ಯೆ ಕಾಮನ್ ಆಗಿ ಕಾನ್ಸ್ಟೆಂಟ್ ಆಗಿ ನಿಂತಿರೋದು ಮಿತ್ರ ಅವರ ಕ್ಯಾರೆಕ್ಟರ್ ಎರಡು ಶೇಡ್ಸ್ ಇದೆ ಯಂಗ್ ಏಜ್ ಅಲ್ಲಿ ರಾಜ್ ಅವರೊಟ್ಟಿಗೆ ಕಾಣಿಸಕೊತಾ ಇದ್ದಾರೆ ಅಂಡ್ ಈಗ ವಯಸ್ಸಾದಮೇಲೆ ಪ್ರಜ್ವಲ್ ಅವರ ಜೊತೆಗೆ. ಸೋ ಐ ಥಿಂಕ್ ಆ ಪಾತ್ರಕ್ಕೆ ಇಲ್ಲೊಂದು ಮುಖ್ಯವಾದ ಜವಾಬ್ದಾರಿನೇ ಇದೆ ಅಂಡ್ ಆ ಫೇಸ್ ಅಲ್ಲಿ ಟ್ವಿಸ್ಟ್ ಗಳು ಬರೋದಂತೂ ಪಕ್ಕ ಇನ್ನು ಫೀಮೇಲ್ ಲೀಡ್ಸ್ ಕಡೆ ಬಂದ್ರೆ ಸಂಪದ ಅವರು ಹಾಗೆ ಸುಷ್ಮಿತಾ ಭಟ್ಟ ಅವರು ಎಲ್ಲೂ ಮಾಸ್ಕ್ ಆಗಲಿಲ್ಲ ಟ್ರೈಲರ್ ನಲ್ಲಿ ಚೆನ್ನಾಗಿನೇ ಪೋಟ್ರೆ ಆಗಿದ್ದಾರೆ. ಸೋ ಅವರಿಗೂ ಇಲ್ಲಿ ಒಳ್ಳೆ ರೋಲ್ನ ಕೊಟ್ಟಿದ್ದಾರೆ ಅಂತಾನೇ ಭಾವಿಸ್ತಾ ಇದೀನಿ.
ಇನ್ನು ಟೆಕ್ನಿಕಲಿ ಹೇಳೋದಾದ್ರೆ ಟ್ರೈಲರ್ ಕಟ್ ಸಕತ್ತಾಗಿದೆ. ವಿಶುವಲ್ಸ್ ಅಂತೂ ಇಷ್ಟ ಆಗೋಯ್ತು ನನಗೆ ಕ್ಯಾರೆಕ್ಟರ್ ನ ರಿವೀಲ್ ಮಾಡೋದಾಗಿರಲಿ ಅಥವಾ ಫ್ರೇಮ್ ಶಿಫ್ಟ್ ಮಧ್ಯೆ ಬೀಳೋ ಟ್ರಾನ್ಸಿಷನ್ಸ್ ಮತ್ತೆ ಕ್ಯಾಮೆರಾ ಮೂಮೆಂಟ್ ಒಟ್ಟನಲ್ಲಿ ಇಂಟೆನ್ಸಿಟಿ ಅಂತೂ ತ್ರೋ ಔಟ್ ದ ವಿಡಿಯೋ ಕ್ಯಾರಿ ಆಗ್ತಾನೆ ಇತ್ತು. ಸ್ಪೆಷಲಿ ಪ್ರಜ್ವಲ್ ಅವರನ್ನ ಇಂಟ್ರೊಡ್ಯೂಸ್ ಮಾಡಿಸಿದಂತಹ ಆ ಫ್ರೇಮ್ ಆ ಟೇಕ್ ಏನು ಕೊಟ್ಟಿದ್ದಾರೆ ಪ್ಯೂರ್ ಕ್ರಾಫ್ಟ್ ಅದು ಇನ್ನು ಇದರ ಮೇಜರ್ ಹೈಲೈಟ್ ಅಂದ್ರೆ ಅದು ಬ್ಯಾಕ್ಗ್ರೌಂಡ್ ಸ್ಕೋರಿಂಗ್ ಹಾಗೆ ಎಡಿಟಿಂಗ್ ಸಚಿನ್ ಬಸರೂರ್ ಹಾಗೆ ಪ್ರತೀಕ್ ಅವರು ಫ್ರೇಮ್ ಟು ಫ್ರೇಮ್ ಎಲಿವೇಟ್ ಮಾಡ್ತಾನೆ ಹೋಗಿದ್ದಾರೆ ಅಂಡ್
ಆಕ್ಚುಲಿ ಸರ್ಪ್ರೈಸ್ ಆಗೋದೆ ನಾನಂತು ಆನ್ ಸ್ಕ್ರೀನ್ ವಿಶುವಲ್ಸ್ ಅಲ್ಲಿ ಕೊಟ್ಟಿರೋ ಲೇಯರಿಂಗ್ ಜೊತೆಗೆ ಆ ಡೀಟೇಲಿಂಗ್ ಮತ್ತಷ್ಟು ಡೆಪ್ತ್ ಅಲ್ಲಿ ಬಂದು ಮುಟ್ಟೋ ಹಾಗೆ ಕೊಟ್ಟಿರೋ ಬಿಜಿಎಂ ಇಂಟರೆಸ್ಟಿಂಗ್ ಆಗಿತ್ತು ಬಟ್ ಪರ್ಸನಲಿ ಕಷ್ಟ ಆಗಿದ್ದು ಅಂದ್ರೆ ಆ ಕಾಂಟ್ರವರ್ಸಿ ಪ್ರಜ್ವಲ್ ಅವರ ಧ್ವನಿ ಇದ್ದಿದ್ರೆ ಇದಕ್ಕೊಂದು ಪರಿಪೂರ್ಣತೆ ಸಿಕ್ಕಿರೋದು ಪರವಾಗಿಲ್ಲ ಆದಷ್ಟು ಬೇಗ ಎಲ್ಲ ಒಟ್ಟಿಗೆ ಗೆ ಕೂತು ಸಾರ್ಟ್ ಔಟ್ ಮಾಡಿಕೊಂಡು ಈ ಸಮಸ್ಯೆಗೆ ಪರಿಹಾರನ್ನ ಕಂಡುಕೊಳ್ಳಿ. ಪ್ರಜ್ವಲ್ ಅವರ ಧ್ವನಿ ಸಿನಿಮಾದಲ್ಲಿ ಮತ್ತೆ ಬರಲಿ ಹಾಗೆ ಜುಲೈ 24ಕ್ಕೆ ಚಿತ್ರ ಬಿಡುಗಡೆ ಆಗ್ತಾ ಇದೆ. ಸೋ ಇಡೀ ತಂಡಕ್ಕೆ ಒಳ್ಳೆದಾಗಲಿ ಅಂತ ಕೇಳ್ಕೊಳ್ತಾ ನಾನು ಹೊರಡ್ತಾ
ಇದೀನಿ. ಇನ್ನ ನಿಮ್ಮಲ್ಲಿ ಯಾರಾದ್ರೂ ಆಲ್ರೆಡಿ ಈ ಟ್ರೈಲರ್ನ ನೋಡಿ ಆಗಿದ್ರೆ ಇದು ನಿಮಗೆ ಯಾವತರ ಅನುಭವ ಕೊಡ್ತು ಅನ್ನೋದನ್ನ ಕೆಳಗಡೆ ತಪ್ಪದೇನೆ ಕಮೆಂಟ್ ಮಾಡಿ ತಿಳಿಸಿಬಿಡಿ ಮತ್ತೆ ಸಿಗೋಣ. ಸೈನಿಂಗ್ ಆಫ್ ಲಿಖಿತ್.
