ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಹ*ತ್ಯೆ | ಕೊಂದವರು ಯಾರು?

NS CREATION FF
0

 ಕಳೆದ 10 ತಿಂಗಳಿನಿಂದ ಮಂಗಳೂರು ನಗರ ರೌಡಿಗಳ ಹಾವಳಿಗಳಿಂದ ಮುಕ್ತವಾಗಿತ್ತು. ಆದರೆ ಮತ್ತೆ ಮಾರಕಾಸ್ತ್ರಗಳು ಜಲಪಿಸಿವೆ. ಬಿಲ ಸೇರಿದ್ದ ಪಾತಕಿಗಳು ಹೊರಬಂದು ಇವತ್ತು ರಸ್ತೆಯಲ್ಲೇ ಒಂದು ಹೆಣ ಹಾಕಿದ್ದಾರೆ. ನುಸುಕಿನ ಜಾವದಲ್ಲಿ ಮಂಗಳೂರು ನಿಶಬ್ದವಾಗಿದ್ದಾಗಲೇ ರೌಡಿಗಳು ರಕ್ತ ಹರಿಸಿದ್ದಾರೆ.



 ಇಂದು ಮುಂಜಾನೆ ತೊಕ್ಕುಟ್ಟು ಫ್ಲೈ ಓವರ್ ಮೇಲೆ ರೌಡಿ ಶೀಟರ್ ಒಬ್ಬನ ಬರ್ಬರ ಹತ್ಯೆ ನಡೆದಿದೆ ಆರಿಫ್ ಹುಸೇನ್ ಆಲಿಯಾಸ್ ಟ್ಯಾಬ್ಲೆಟ್ ಆರಿಫ್ ಕೊಲೆಯಾದ ರೌಡಿ ಶೀಟರ್ ಈತ ಮೂಲತ ಮಂಗಳೂರಿನ ಕುದ್ರೋಳಿ ನಿವಾಸಿ ಸದ್ಯ ಉಚ್ಚಿಲದ ಮುಳ್ಳುಗಡ್ಡೆಯಲ್ಲಿ ವಾಸವಿದ್ದ 42 ವರ್ಷದ ಟ್ಯಾಬ್ಲೆಟ್ ಆರಿಫ್ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾನೆಯಲ್ಲಿ ರೌಡಿಶೀಟರ್ ಇದೆ.

 

ಈತ ದಕ್ಕೆಯಲ್ಲಿ ಮೀನಿನ ವ್ಯಾಪಾರ ಮಾಡ್ತಾ ಇದ್ದ. ತನ್ನ ವ್ಯಾಪಾರಕ್ಕಾಗಿ ಈತ ಬೈಕ್ನಲ್ಲಿ ದಕ್ಕೆಗೆ ಹೋಗ್ತಾ ಇದ್ದ ಸಂದರ್ಭದಲ್ಲಿ ಕಾರ್ನಲ್ಲಿ ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿಗಳು ಟ್ಯಾಬ್ಲೆಟ್ ಆರಿಫ್ ನನ್ನನ್ನ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. ಆರಿಫ್ ತೊಕ್ಕೋಟ್ ಫ್ಲೈ ಓವರ್ ಮೇಲೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಿಂದ ಡಿಕ್ಕಿ ಹೊಡೆಯಲಾಗಿದೆ. ಡಿಕ್ಕಿ ಅರಬಸಕ್ಕೆ ರಸ್ತೆಗೆ ಬಿದ್ದ ಆರಿಫ್ ನನ್ನ ದುಷ್ಕರ್ಮಿಗಳ ತಂಡ ಕಡಿದು ಹತ್ಯೆ ಮಾಡಿದೆ ಎಂದು ಹೇಳಲಾಗ್ತಾ ಇದೆ ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ 2020 ಎರಲ್ಲಿ ಇದೇ ಆರಿಫ್ನ ಹತ್ಯೆಗೆ ಯತ್ನ ನಡೆದಿತ್ತು ಆದರೆ ಅಂದು


ಬಚಾವಾಗಿದ್ದ ಆರಿಫ್ ಇಂದು ಕೊಲೆಯಾಗಿ ಹೋಗಿದ್ದಾನೆ ಈತ ನುಸುಕಿನ ಜಾವದಲ್ಲಿ ಬೈಕ್ನಲ್ಲಿ ದಕ್ಕೆ ಹೋಗುವುದನ್ನ ಅರಿತಿದ್ದವರು ಹೊಂಚು ಹಾಕಿ ಕೊಲೆ ಮಾಡಿರುವ ಸಾಧ್ಯತೆ ಇದೆ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ನಡೆದಿರುವುದು ಕೊಲೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ ಸೀನ್ ಮತ್ತು ಗಾಯಗಳನ್ನ ನೋಡುವಾಗ ಕೊಲೆ ಎಂದು ಸ್ಪಷ್ಟವಾಗುತ್ತೆ ಎಂದಿದ್ದಾರೆ ಕೊಲೆ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ ನಮಗೂ ಕ್ಲೂ ಸಿಕ್ಕಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ರು ಕಾರ್ಯಾಚರಣೆಯಲ್ಲಿದ್ದಾರೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಘಟನಾಸ್ಥಳಕ್ಕೆ ಡಿಸಿಪಿ ಮಿಥುನ್ ತಂಡ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದೆ. 


ಅಂದಹಾಗೆ ಮಂಗಳೂರು ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ನೇಮಕವಾದ ಬಳಿಕ ಕಳೆದ ಜೂನ್ ತಿಂಗಳಿನಿಂದ ಇವತ್ತಿನವರೆಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿ ಎಲಿಮೆಂಟ್ಗಳನ್ನ ಕಟ್ಟಿ ಹಾಕಿದ್ರು ರೌಡಿಸಂಗೆ ಅವಕಾಶವೇ ಇಲ್ಲದಂತೆ ಮಾಡಿದ್ರು ಅದರಿಂದ ರೌಡಿ ಕಾಳುಗಳಿಗೆ ಬ್ರೇಕ್ ಬಿದ್ದಿತ್ತು ಕಮಿಷನರ್ ಭಯದಲ್ಲಿ ಹಲೋ ರೌಡಿಗಳು ನಗರವನ್ನೇ ತೊರೆದು ಹೋಗಿದ್ದಾರೆ ಅಂತ ಹೇಳಲಾಗ್ತಾ ಇದೆ. ಅದಕ್ಕೆ ಸವಾಲು ಎಸೆಯುವಂತೆ ಇಂದು ತೊಕ್ಕೋಟು ಫ್ಲೈ ಓವರ್ನಲ್ಲಿ ನುಸುಕಿನ ವೇಳೆಯಲ್ಲಿ ಕೊಲೆ ನಡೆದಿದೆ. ಕಮಿಷನರ್ ರೆಡ್ಡಿ ಬಂದಮೇಲೆ ತಣ್ಣಗೆ ಮಲಗಿದ್ದ ರೌಡಿಗಳು ಮತ್ತೆ ಎದ್ದು ನಿಲ್ಲುವ ಪ್ರಯತ್ನ ನಡೆಸ್ತಾ ಇದ್ದಾರೆ ಎಂಬ ಅನುಮಾನ ಕಾಡ್ತಾ ಇದೆ.


Post a Comment

0Comments

Post a Comment (0)
To Top