ಲೈಫ್ ಟುಡೇ ಜನರೇಶನ್ ಇಂದ ಜನರೇಶನ್ಗೆ ಪ್ರೀತಿ ಅನ್ನೋದು ಹಾಗೆ ಇದ್ರು ಅದರ ಡೆಫಿನಿಷನ್ ಮಾತ್ರ ಬದಲಾಗ್ತಾನೆ ಬಂದಿದೆ. ಇವತ್ತಿನ 2ಕೆ ಕಿಡ್ಸ್ ಎದುರಿಸ್ತಾ ಇರುವಂತಹ ಅತೀ ದೊಡ್ಡ ಕನ್ಫ್ಯೂಷನ್ ಅಂದ್ರೆ ಲವ್ವ ಕೆರಿಯರ್ ಅಥವಾ ಲೈಫ್ ಅಲ್ಲಿ ಸೆಟ್ಲ್ ಆಗೋದ ಅನ್ನೋದು ಇದು ಕಾಂತ ಕನ್ನಳ್ಳಿ ಅವರು ಡೈರೆಕ್ಟ್ ಮಾಡಿರುವಂತಹ ಸಿನಿಮಾ ಇದರ ಕಥೆ ಬರೆದು ಮುಖ್ಯ ಪಾತ್ರದಾರಿಯಾಗಿ ಕಿರಣ್ ಆದಿತ್ಯ ಅವರು ಅಭಿನಯಿಸಿದ್ದಾರೆ .
ಅವರ ಜೊತೆಗೆ ಲೇಖಕಾ ಚಂದ್ರ ತಬಲಾ ನಾಣಿ ಕಾಕ್ರೋಚ್ ಸುದಿ ಯುಕ್ತ ಇನ್ನು ಮುಂತಾದವರು ನಡೆಸಿರುವಂತಹ ಸಿನಿಮಾನೇ ಲೈಫ್ ಟುಡೇ ಈ ಸಿನಿಮಾ ಇದೀಗ ರಾಜ್ಯದಾದ್ಯಂತ ಬಿಡುಗಡೆ ಆಗಿದೆ .
ಎಲ್ಲರಿಗೂ ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ಕಥೆಯ ನಾಯಕನ ಹೆಸರು ಶಿವ ತಂದೆ ತಾಯಿಯ ಪ್ರೀತಿಯ ಅನುಭವನೇ ಇಲ್ಲದೆ ಬೆಳೆದಂತಹ ರಫ್ ಅಂಡ್ ಟಫ್ ಹುಡುಗ. ನಾಯಕಿ ಅಮೃತ ಇಂದಿನ ಪ್ರಾಕ್ಟಿಕಲ್ ಪ್ರಪಂಚದಲ್ಲಿ ಸುಮಾರು ಹುಡುಗಿಯರ ಪ್ರತಿನಿಧಿಯಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವೆ ಪ್ರೀತಿ ಚಿಗರಿದ್ರು ಪ್ರಾಕ್ಟಿಕಲ್ ಲೈಫ್ ಬಿಸಿಗೆ ಪ್ರೀತಿಯ ಕಾವು ತಾಳಲಾರದೆ ನಾಯಕಿ ತನ್ನ ಹಾದಿಯನ್ನ ಆಯ್ಕೆ ಮಾಡ್ಕೋಬೇಕಾಗುತ್ತೆ.
ನಂತರ ಮತ್ತೆ ಅವಳು ಅವನ ಜೀವನಕ್ಕೆ ವಾಪಸ್ ಬಂದಾಗ ಏನೆಲ್ಲಾ ಗೊಂದಲಗಳು ಭಾವನಾತ್ಮಕ ತಿರುವುಗಳು ಎದುರಾಗುತ್ತೆ ಅನ್ನೋದೇ ಲೈಫ್ ಟುಡೇ ಸಿನಿಮಾದ ಪ್ಲಾಟ್. ಸಿನಿಮಾದ ಪ್ಲಸ್ ಅಂತಂದ್ರೆ ಇದರ ಕಥಾವಸ್ತು. ಇವತ್ತಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇನ್ಸ್ಟೆಂಟ್ ಲವ್ ಮತ್ತು ಪ್ರಾಕ್ಟಿಕಲ್ ಲೈಫ್ ನಿಂದಾಗಿ ಸಂಬಂಧಗಳು ಎಷ್ಟು ಬೇಗ ಮುರಿದು ಬೀಳ್ತಾ ಇದೆ ಅನ್ನೋದನ್ನ ನಿರ್ದೇಶಕ ಕಾಂತ ಕನ್ನಳ್ಳಿ ಚೆನ್ನಾಗಿ ಗ್ರಹಿಸಿದರೆ ಯುವಜನತೆಗೆ ಕೆಲವು ಸೀನ್ಗಳು ಅರೆ ಇದು ನನ್ನ ಲೈಫ್ ಅಲ್ಲೂ ನಡೀತಲ್ಲ ಅಂತ ಕನೆಕ್ಟ್ ಆಗುತ್ತೆ.
ಕಥೆ ತೀರ ಹೊಸದು ಅಂತ ಹೇಳ್ತಾ ಇಲ್ಲ ಆದರೆ ಅದರ ಟೆಂಪ್ಲೇಟ್ ಅನ್ನ ಸ್ಕ್ರೀನ್ ಪ್ಲೇ ಮೂಲಕ ಇಲ್ಲಿ ಡೀಸೆಂಟ್ಆಗಿ ತೆರೆ ಮೇಲೆ ತಂದಿದ್ದಾರೆ. ಕಾಂತ ಕಣ್ಣಳ್ಳಿ ಅವರ ಆಲೋಚನೆ ಒಳ್ಳೆದಾಗಿದೆ. ಆದರೆ ಅದನ್ನ ಸ್ಕ್ರೀನ್ ಮೇಲೆ ತರುವಾಗ ಕೆಲವು ಸಣ್ಣ ಪುಟ್ಟ ಲಾಜಿಕ್ಸ್ ಕಂಟಿನ್ಯೂಿಟಿಗಳು ಇನ್ನು ಬೆಟರ್ ಮಾಡಬಹುದಿತ್ತು ಅನ್ನುವಂತ ಎಕ್ಸ್ಪೀರಿಯನ್ಸ್ ಆಗಿದ್ದು ಸುಳ್ಳಲ್ಲ.
ಸಿನಿಮಾದಲ್ಲಿನ ಡೈಲಾಗ್ಸ್ ಕ್ಯಾಜುವಲ್ ಆಗಿತ್ತು ಅಷ್ಟೇ ಅರ್ಥಪೂರ್ಣವಾಗಿತ್ತು. ಆದರೆ ಕೆಲವು ಕಡೆ ಪಾತ್ರಗಳು ನೈಜವಾಗಿ ಮಾತಾಡೋ ಬದಲು ಸ್ವಲ್ಪ ಡ್ರಾಮಾ ಜಾಸ್ತಿ ಆಯ್ತು ಅಂತ ಅನ್ಸಿದ್ದು ನಿಜನೇ. ಇನ್ನು ಪರ್ಫಾರ್ಮೆನ್ಸಸ್ ಬಗ್ಗೆ ಹೇಳೋದಾದ್ರೆ ಸಿನಿಮಾದ ನಟಿ ಲೇಖಕಾ ಚಂದ್ರ ಇಡೀ ಸಿನಿಮಾದ ಎಮೋಷನಲ್ ಬ್ಯಾಕ್ ಬೋನ್ ತಮ್ಮ ಪಾತ್ರದ ಕನ್ಫ್ಯೂಷನ್ ಗಿಲ್ಟ್ ಮತ್ತೆ ಎಮೋಷನಲ್ ಸೀನ್ಗಳಲ್ಲಿ ಚೆನ್ನಾಗಿ ಅಭಿನಯ ಮಾಡಿದ್ದಾರೆ ಹೀರೋ ಕಿರಣ್ ಆದಿತ್ಯ ಸೈಲೆಂಟ್ ಮತ್ತು ಎಮೋಷನಲ್ ಪ್ರೇಮಿಯಾಗಿ ನೀಟಾಗಿ ಕಾಣಿಸಿಕೊಂಡಿದ್ದಾರೆ.
ಮೊದಲ ಸಿನಿಮಾ ಆದರೂ ಇವರ ಅಭಿನಯ ಡೀಸೆಂಟ್ ಆಗಿತ್ತು ತಬಲಾರಾಣಿ ಸಿನಿಮಾನ ತುಂಬಾ ಸೀರಿಯಸ್ ಆಗಿ ಹೋದಗಲೆಲ್ಲ .ಇವರ ಕಾಮಿಡಿ ಟೈಮಿಂಗ್ ಪ್ರೇಕ್ಷಕರಿಗೆ ಕೊಂಚ ರಿಲ್ಯಾಕ್ಸೇಷನ್ ಕೊಡ್ತಾ ಇತ್ತು ತಂದೆ ಪಾತ್ರದಲ್ಲಿ ತಬಲಾರಾಣಿ ಅವರ ಮೆಚೂರ್ ಡೈಲಾಗ್ಗಳು ಸೂಪರ್ ಎಮೋಷನಲ್ ಆಂಗಲ್ ಅಲ್ಲಿ ಕೂಡ ಇವರ ಅವರಿಂದ ಸಿನಿಮಾಗೆ ಒಳ್ಳೆ ಕಾಂಟ್ರಿಬ್ಯೂಷನ್ ಸಿಕ್ಕಿದೆ. ನಾಯಕ ನಾಯಕಿ ಹೊರತುಪಡಿಸಿ ಸುತ್ತ ಮುತ್ತಲ್ಲಿ ಇರುವಂತಹ ಪೋಷಕ ಪಾತ್ರಗಳಿಗೆ ಕ್ಯಾರೆಕ್ಟರ್ ಗ್ರಾಫ್ ಇಲ್ಲಿ ಕಾಣಲಿಲ್ಲ. ಅವರ ಪಾತ್ರೆಗಳಿಗೆ ಇನ್ನಷ್ಟು ಆಳವನ್ನ ಕೊಟ್ಟಿದ್ದಿದ್ದರೆ ಸಿನಿಮಾ ಹೆಚ್ಚು ನೈಜವಾಗಿ ಮೂಡು ಬರ್ತಾ ಇತ್ತು.
ಶ್ರೀಧರ್ವಿ ಸಂಭ್ರಮ ಅವರ ಮ್ಯೂಸಿಕ್ ಈ ಸಿನಿಮಾಗೆ ಇನ್ನೊಂದು ಪ್ಲಸ್ ಮೆಲೋಡಿ ಹಾಡುಗಳು ಕೇಳಲು ಹಿತವಾಗಿದೆ. ನಾನು ಎಕ್ಸ್ಪೆಕ್ಟ್ ಮಾಡಿದಕ್ಕಿಂತ ಒಳ್ಳೆಯ ಹಾಡುಗಳು ಈ ಸಿನಿಮಾದಲ್ಲಿ ನನಗೆ ನೋಡೋದಕ್ಕೆ ಸಿಕ್ಕಿದ್ವು ಎಮೋಷನಲ್ ಸೀನ್ಗಳಲ್ಲಿ ಬ್ಯಾಕ್ಗ್ರೌಂಡ್ ಸ್ಕೋರ್ ದೃಶ್ಯದ ತೀವ್ರತೆಯನ್ನ ಹೆಚ್ಚಿಸೋದಕ್ಕೆ ನೆರವಾಯಿತು. ಇನ್ನು ಟೆಕ್ನಿಕಲ್ ಆಸ್ಪೆಕ್ಟ್ಸ್ ಬಗ್ಗೆ ಮಾತಾಡೋದಾದ್ರೆ ಗುರುಪ್ರಸಾದ್ ಎಂಜಿ ಅವರ ಕ್ಯಾಮೆರಾ ವರ್ಕ್ ಕಲರ್ಫುಲ್ ಆಗಿದೆ. ಫ್ರೇಮ್ಗಳು ಯೂತ್ಫುಲ್ ವೈಬ್ನ್ನ ಕೊಡ್ವು. ಎಡಿಟಿಂಗ್ ಪರ್ಸ್ಪೆಕ್ಟಿವ್ ಇಂದ ನೋಡೋದಾದ್ರೆ ಸಿನಿಮಾ ಎರಡುವರೆ ಗಂಟೆ ಇದ್ದು ಫಸ್ಟ್ ಹಾಫ್ ತುಂಬಾ ನಿಧಾನವಾಗಿ ಸಾಗುತ್ತೆ.
ಅನಗತ್ಯ ಸೀನ್ಗಳನ್ನ ಎಡಿಟ್ ಮಾಡಿ ಸ್ಕ್ರೀನ್ ಪ್ಲೇನ ಇನ್ನು ಶಾರ್ಕ್ ಮಾಡಬಹುದಾಗಿತ್ತು. ಫಸ್ಟ್ ಹಾಫ್ ಅಲ್ಲಿ ಕ್ಯಾರೆಕ್ಟರ್ಗಳ ಇಂಟ್ರೊಡಕ್ಷನ್ ಅಂಡ್ ರೊಟೀನ್ ಟೆಂಪ್ಲೇಟ್ ಹೋಗ್ತಿದೆಯಲ್ಲ ಅಂತ ಅನ್ಸಿದ್ದು ಸುಳ್ಳಲ್ಲ. ಆದರೆ ಫಸ್ಟ್ ಹಾಫ್ ಗಿಂತ ಸೆಕೆಂಡ್ ಹಾಫ್ ನಲ್ಲಿ ಕಥೆಗೆ ಹೆಚ್ಚು ವೇಗ ಸಿಗುತ್ತೆ. ಮುಖ್ಯವಾಗಿ ಕ್ಲೈಮ್ಾಕ್ಸ್ ಅಲ್ಲಿ ಬರುವಂತಹ ಕೆಲವೊಂದು ಎಮೋಷನಲ್ ಸೀನ್ಸ್ ಗಳು ಮನಸ್ಸನ್ನ ತಡ್ತವೆ.
ಇದೆ ಕ್ಲೈಮ್ಾಕ್ಸ್ ಅಂತ ಅನ್ಕೊಳ್ಳುವಷ್ಟರಲ್ಲೇ ಇನ್ನೊಂದಷ್ಟು ಸರ್ಪ್ರೈಸ್ ಗಳನ್ನ ಪ್ಲೇಸ್ ಮಾಡಿರೋದು ಈ ಸಿನಿಮಾನ ಕೊಂಚ ಮಟ್ಟಿಗೆ ಸ್ಪೆಷಲ್ ಮಾಡುತ್ತೆ. ಲೈಫ್ಗೆ ಸಂಬಂಧಿಸಿದಂತೆ ಕೊಡುವಂತಹ ಮೆಸೇಜ್ ಕೂಡ ಅರ್ಥಪೂರ್ಣವಾಗಿದೆ. ಕಡಕ್ಕಾಗಿ ಹೇಳೋದಾದ್ರೆ ಲೈಫ್ ಟುಡೇ ಇವತ್ತಿನ ಜನರೇಶನ್ನ ಲವ್ ಕನ್ಫ್ಯೂಷನ್ ಕೆರಿಯರ್ ಇದರ ಸುತ್ತ ಹೆಣೆದಿರುವಂತಹ ಸಿನಿಮಾ ಇವತ್ತಿನ ಯೂತ್ಸ್ ಗೆ ಇತ್ತೀಚೆಗೆ ಬ್ರೇಕಪ್ ಅನ್ನ ಅನುಭವಿಸಿದವರಿಗೆ ಅಥವಾ ಲೈಫ್ಅಲ್ಲಿ ಪ್ರಾಕ್ಟಿಕಲ್ ಎಮೋಷನಲ್ ಡ್ರಾಮಾ ಇಷ್ಟ ಪಡೋರಿಗೆ ಇದೊಂದು ಡೀಸೆಂಟ್ ವಾಚ್ ದೊಡ್ಡ ಮಾಸ್ ಎಂಟರ್ಟೈನರ್ ನ್ನ ನಿರೀಕ್ಷೆ ಮಾಡದೆ ಒಂದು ಸಿಂಪಲ್ ಎಮೋಷನಲ್ ರೈಡ್ ನೋಡಬೇಕು.
