ಕೊನೆಗೂ 2025 ಮುಗಿಯುವ ಹಂತಕ್ಕೆ ಬಂದಿದೆ. ಇಂಡಿಯನ್ ಫಿಲಂ ಇಂಡಸ್ಟ್ರಿಯ ಆಡಿಯನ್ಸ್ ಗೆ ಈ ವರ್ಷ ಸಾಕಷ್ಟು ಗ್ರೇಟ್ ಸಿನಿಮಾಗಳನ್ನ ನೋಡೋದಕ್ಕೆ ಸಾಧ್ಯ ಆಗಿದೆ. ಕನ್ನಡದಿಂದ ಕೂಡ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಅವುಗಳಲ್ಲಿ ಕಾಂತಾರ ಚಾಪ್ಟರ್ ಒನ್ ಸೂ ಫ್ರಮ್ ಸೋ ಪ್ರಮುಖವಾದವು. ಅದೇತರ 2026 ರಲ್ಲಿ ಕನ್ನಡ ಚಿತ್ರಂಗದಲ್ಲಿ ಕೆಲವೊಂದು ಸಿನಿಮಾಗಳು ಸಾಕಷ್ಟು ಭರವಸೆಯನ್ನ ಮೂಡಿಸಿದ್ದು ಆ ಸಿನಿಮಾಗಳನ್ನ ನೋಡೋದಕ್ಕೆ ನಮ್ಮ ಕನ್ನಡದ ಆಡಿಯನ್ಸ್ ಕೂಡ ಕಾತಿರಾಗಿ ಕಾಯ್ತಾ ಇದ್ದಾರೆ. ಅಂತಹ ಮೋಸ್ಟ್ ಅವೈಟೆಡ್ ಸ್ಟಾರ್ ಸ್ಟಾರ್ಟೆಡ್ ಸಿನಿಮಾಗಳು ಯಾವುದು
ಹಾಯ್ ಎಲ್ಲರಿಗೂ
![]() |
ನಮಸ್ಕಾರ ಅಂಡ್ ವೆಲ್ಕಮ್ ಟು ಕಡಕ್ ಸಿನಿಮಾ ಕೆಡಿ ದ ಡೆವಿಲ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜ ಅವರ ಬಹು ನಿರೀಕ್ಷಿತ ಸಿನಿಮಾ ಕೆಡಿ ದ ಡೆವಿಲ್ ಕನ್ನಡ ಹಾಗೂ ಬಾಲಿವುಡ್ ನ ಸಾಕಷ್ಟು ಖ್ಯಾತನ ಅವರು ನಡೆಸಿರುವಂತಹ ಈ ಸಿನಿಮಾ ಯಾವತ್ತೋ ರಿಲೀಸ್ ಆಗ್ಬೇಕಿತ್ತು. ಆದರೆ ಇದುವರೆಗೂ ಕೂಡ ಸಿನಿಮಾ ಅವಾಗ ರಿಲೀಸ್ ಆಗುತ್ತೆ ಇವಾಗ ರಿಲೀಸ್ ಆಗುತ್ತೆ ಅಂತ ಪ್ರೇಮ್ಸ್ ಸರ್ ಆಟಾಡಿಸಿಕೊಂಡೆ ಬಂದಿದ್ರು. ಅಂಡ್ ಈಗ ಗೊತ್ತಾಗಿರುವಂತಹ ವಿಷಯ ಏನಪ್ಪಾ ಅಂದ್ರೆ ಸಿನಿಮಾ 2026ರ ಏಪ್ರಿಲ್ 30ಕ್ಕೆ ರಿಲೀಸ್ ಆಗ್ತಿದೆ ಅಂತ ಸಿನಿಮಾದ ಮತ್ತೊಂದು ಹೈಲೈಟ್ ಅಂದ್ರೆ ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರು ಕಾಣಿಸಿಕೊಂಡಿದ್ದಾರಂತೆ ಹೀಗಾಗಿ ಖಂಡಿತವಾಗಿ ಸಿನಿಮಾನ ದೊಡ್ಡ ಪರದೆ ಮೇಲೆ
ನೋಡೋದಕ್ಕೆ ಮಾಸ್ ಅಭಿಮಾನಿಗಳಂತೂ ಫುಲ್ ಕಾಯ್ತಾ ಇದ್ದಾರೆ ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ದೊಡ್ಡ ಮಟ್ಟದ ಹವಾನ ಕ್ರಿಯೇಟ್ ಮಾಡಿದೆ ನೋಡೋಣ 2026 ರಲ್ಲಿ ಈ ಸಿನಿಮಾ ಯಾವ ರೀತಿ ಹೆಸರು ಮಾಡುತ್ತೆ ಅಂತ ಕಿಚ್ಚಾಸ್ ರಾಮಕಾಮ್ ರೆಗ್ಯುಲರ್ ಮಾಸ್ ಎಂಟರ್ಟೈನರ್ ಸಿನಿಮಾಗಳಿಂದ ಹೊರಬಂದು ಕಿಚ್ಚ ಸುದೀಪ ರವರು ಮುಂದಿನ ವರ್ಷ 2026ರ ಮಧ್ಯಭಾಗದಲ್ಲಿ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವನ್ನ ತಮ್ಮ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾದ ಪ್ರೇಕ್ಷಕರಿಗೆ ನೀಡೋದಕ್ಕೆ ಸಿದ್ಧವಾಗಿದ್ದಾರೆ. ಕುದ್ದಾಗಿ ತಾವೇ ತಮ್ಮ ಮುಂದಿನ ಸಿನಿಮಾದ ಬಗ್ಗೆ ಕಿಚ್ಚ ಹೇಳಿಕೊಂಡಿದ್ದಾರೆ ತೆಲುಗಿನ ಪುಷ್ಪ ಖ್ಯಾತಿಯ ನಿರ್ದೇಶಕ ಸುಕುಮಾರ್ ಅವರ ಟೀಮ್ ಿಂದ ಒಬ್ಬ ಯುವ
ನಿರ್ದೇಶಕ ಈ ಸಿನಿಮಾದ ಕಥೆಯನ್ನ ಮಾಡಿದ್ದು ಅವರೇ ಡೈರೆಕ್ಟ್ ಮಾಡ್ತಾ ಇದ್ದಾರಂತೆ 2026ರ ಮಧ್ಯಭಾಗದಲ್ಲಿ ಈ ಸಿನಿಮಾ ರಿಲೀಸ್ ಆಗಬಹುದು ಅಂತ ಗಾಂಧಿನಗರದ ಮೂಲಗಳು ಹೇಳ್ತಾ ಇವೆ ಕಾದು ನೋಡೋಣ ಸಿನಿಮಾ ಯಾವ ರೀತಿ ತಯಾರಾಗುತ್ತೆ ಅಂತ ಉಗ್ರಾಯುಧಂ 2026 ರಲ್ಲಿ ಪ್ರತಿಯೊಬ್ಬರು ಕೂಡ ಎದುರು ನೋಡ್ತಿರುವಂತಹ ಮತ್ತೊಂದು ಸಿನಿಮಾ ಅಂದ್ರೆ ಅದು ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಅಭಿನಯದ ಉಗ್ರಾಯುಧಂ ಸಿನಿಮಾ ಈ ಸಿನಿಮಾ ಇಲ್ಲಿ ಈ ಲಿಸ್ಟ್ ಅಲ್ಲಿ ಇರೋದಕ್ಕೆ ತುಂಬಾ ಕಾರಣಗಳಿದೆ. ಮೊದಲನೆದಾಗಿ ನಿಮ್ಮೆಲ್ಲರಿಗೂ ಗೊತ್ತೇ ಇದೆ ಭಗೀರ ಸಿನಿಮಾದ ನಂತರ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಯಾವುದೇ ಸಿನಿಮಾ ಕೂಡ ತೆರೆ ಮೇಲೆ ಬಂದಿಲ್ಲ.
ಹೀಗಾಗಿ 2026 ರಲ್ಲಿ ಕೇವಲ ಅವರ ಅಭಿಮಾನಿಗಳು ಮಾತ್ರ ಅಲ್ಲ ಪ್ರತಿಯೊಬ್ಬರು ಕೂಡ ಅವರಿಂದ ಮತ್ತೊಂದು ಸೂಪರ್ ಹಿಟ್ ಸಿನಿಮಾನ ಎಕ್ಸ್ಪೆಕ್ಟ್ ಮಾಡ್ತಾ ಇದ್ದಾರೆ. ಇನ್ನು ಸ್ಪೆಷಲ್ ಆಗಿ ಉಗ್ರಯುಧಂ ಸಿನಿಮಾನ ಪ್ರತಿಯೊಬ್ಬರು ಕಾಯೋದಕ್ಕೆ ಇರುವಂತಹ ಕಾರಣ ಅಂದ್ರೆ ಇದೊಂದು ಹಿಸ್ಟಾರಿಕಲ್ ಸಿನಿಮಾ ಅನ್ನೋದು. ಇಮ್ಯಾಜಿನರಿ ಕಥೆ ಆದರೂ ಅಥವಾ ನೈಜ ಘಟನೆಗಳನ್ನ ಆದರಿಸಿರುವಂತಹ ಕಥೆ ಆದರೂ ಶ್ರೀಮುರಳಿ ಅವರನ್ನ ಆ ರೀತಿಯ ಪಾತ್ರದಲ್ಲಿ ಅಥವಾ ಕಥೆಯಲ್ಲಿ ನೋಡಬೇಕು ಎನ್ನುವಂತಹ ಸಾಕಷ್ಟು ಜನರ ಕನಸು ಈ ಸಿನಿಮಾದ ಮೂಲಕ ಈಡೇರತಿದೆ ಕಡಿಮೆ ಮಾತಿನ ಮೂಲಕ ಕೂಡ ಗೂಸ್ ಬಂ್ ಸೀನ್ಗಳನ್ನ ಡೆಲಿವರ್ ಮಾಡುವಂತಹ ತಾಕತ್ತನ್ನ ಅವರು ಹೊಂದಿರೋದನ್ನ ನಾವು
ಉಗ್ರಂ ಸಿನಿಮಾದಿಂದ ಇಲ್ಲಿವರೆಗೂ ಸಾಕಷ್ಟು ಬಾರಿ ನೋಡಿದೀವಿ ಇನ್ನು ಕೆಜಿಎಫ್ ಸಿನಿಮಾದ ಅಸಿಸ್ಟೆಂಟ್ ಡೈರೆಕ್ಟರ್ ಆಗಿರುವಂತಹ ಪುನೀತ್ ರುದ್ರಾಂಗ್ ಅವರು ಈ ಸಿನಿಮಾನ ಡೈರೆಕ್ಟ್ ಮಾಡ್ತಾ ಇದ್ದಾರೆ ಇದು ಒಂದು ಹೈಲೈಟಿಂಗ್ ಪಾಯಿಂಟ್ ಅಂತಾನೆ ಹೇಳ್ತೀನಿ ಯಾಕೆಂದ್ರೆ ಇದೇ ರೀತಿಯ ಸಿನಿಮಾವನ್ನ ಯುವರಾಜ್ ರಾಜಕುಮಾರ್ ಅವರಿಗೂ ಕೂಡ ಪುನೀತ್ ಡೈರೆಕ್ಟ್ ಮಾಡೋದಕ್ಕೆ ರೆಡಿಯಾಗಿ ಟೀಸರ್ ಕೂಡ ರಿಲೀಸ್ ಆಗಿತ್ತು ನಂತರ ಆ ಸಿನಿಮಾ ಕ್ಯಾನ್ಸಲ್ ಆಯ್ತು ಈಗ ಅದೇ ರೀತಿಯ ಸಿನಿಮಾನ ಮಾಡೋದಕ್ಕೆ ಹೊರಟ್ರ ಅನ್ನುವಂತ ಅನುಮಾನ ಕೂಡ ಇಲ್ಲಿ ಕಂಡುಬರ್ತಾ ಇದೆ. ಈಗಾಗಲೇ ನವೆಂಬರ್ ತಿಂಗಳಿಂದ ಈ ಸಿನಿಮಾದ ಶೂಟಿಂಗ್ ಸ್ಟಾರ್ಟ್ ಆಗಿದ್ದು ಮುಂದಿನ ವರ್ಷದ ಅಂತ್ಯದ ಒಳಗಡೆ ಈ
ಸಿನಿಮಾ ನಮ್ಮ ಕಣ್ಣ ಮುಂದೆ ಕಾಣಿಸೋದಕ್ಕೆ ಗ್ರಾಂಡ್ ಆಗಿ ರೆಡಿಯಾಗಲಿದೆ ಅನ್ನುವಂತಹ ಭರವಸೆಯನ್ನ ಸಿನಿಮಾ ತಂಡ ನೀಡಿದೆ. 700 ವರ್ಷದ ಹಿಂದಿನ ಕಥೆಯನ್ನ ಡೈರೆಕ್ಟರು ಈ ಸಿನಿಮಾದ ಮೂಲಕ ಹೇಳೋದಕ್ಕೆ ಹೊರಟಿದ್ದಾರೆ ಅನ್ನುವಂತಹ ಸುದ್ದಿ ಕೂಡ ಇದೆ. ಈಗಾಗಲೇ ಸಿನಿಮಾದ ಶೂಟಿಂಗ್ ಆಗಿ ಸಕಲೇಶ್ಪುರದಲ್ಲಿ ದೊಡ್ಡ ಮಟ್ಟದ ಸೆಟ್ ಕೂಡ ನಿರ್ಮಾಣ ಆಗಿದ್ದು ಸಿನಿಮಾ ನಮ್ಮ ಕರ್ನಾಟಕದ ಯಾವುದಾದರೂ ರಾಜಮನೆತನದ ಕಥೆಯನ್ನ ಹೇಳೋದಕ್ಕೆ ಹೊರಟಿದ್ದೀಯಾ ಅನ್ನುವಂತಹ ನಿರೀಕ್ಷೆ ಕೂಡ ಇದೆ. ಟಾಕ್ಸಿಕ್ ಇನ್ನು ಮಾರ್ಚ್ 19 ಕ್ಕೆ ರಿಲೀಸ್ ಆಗೋದಕ್ಕೆ ರೆಡಿಯಾಗಿ ನಿಂತಿರುವಂತಹ ನಮ್ಮ ಕನ್ನಡದ ಇದುವರೆಗಿನ ಬಿಗ್ ಬಜೆಟ್ ಸಿನಿಮಾ ಆಗಿರುವಂತಹ ಟಾಕ್ಸಿಕ್ ಬಗ್ಗೆ ಹೆಚ್ಚಿನ ವಿವರಣೆ
ಬೇಕಿಲ್ಲ ಅನ್ಕೋತೀನಿ. ಯಾಕಂದ್ರೆ ಕುದ್ದಾಗಿ ಸಹನಿರ್ಮಾಣದ ಜೊತೆಗೆ ಈ ಸಿನಿಮಾದ ಕಥೆಯನ್ನ ಕೂಡ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರೇ ಬರೆದಿರೋದು ಅನ್ನುವಂತಹ ಸುದ್ದಿ ಕೇವಲ ಈಗ ಕನ್ನಡ ಆಡಿಯನ್ಸ್ ನಲ್ಲಿ ಮಾತ್ರ ಅಲ್ಲ ಪರಭಾಷೆಯ ಪ್ರೇಕ್ಷಕರಿಗೂ ಕೂಡ ಈ ಸಿನಿಮಾದ ಮೇಲಿನ ಎಕ್ಸ್ಪೆಕ್ಟೇಷನ್ಸ್ ನ ಹೈ ಮಾಡಿದೆ ಅಂತಾನೆ ಹೇಳ್ತೀನಿ. ಈಗಾಗಲೇ ಹುಮಾ ಕುರೇಶಿ ಅವರು ಕೂಡ ಈ ಸಿನಿಮಾದಲ್ಲಿ ತಮ್ಮ ಎಕ್ಸ್ಪೀರಿಯನ್ಸ್ ಬಗ್ಗೆ ತುಂಬಾ ಹೊಗಳಿ ಮಾತಾಡಿದ್ರು. ಕೆಆರ್ ಅದ್ವಾನಿ ಅವರ ಪಾತ್ರದ ರಿವೀಲ್ ಕೂಡ ಈಗಾಗಲೇ ಆಗಿದೆ. ಟೆಕ್ನಿಕಲ್ ವಿಚಾರದಲ್ಲಿ ಹಾಲಿವುಡ್ ತಂತಜ್ಞರು ಈ ಸಿನಿಮಾದಲ್ಲಿ ಮಾಡಿರುವಂತಹ ಕೆಲಸ ಕೂಡ ಎಲ್ಲಾ ಕಡೆ ಕೇಳಿಬರ್ತಿದೆ. ಮುಂದಿನ ವರ್ಷ ಈ ಸಿನಿಮಾ
ಸಾಕಷ್ಟು ಬಾಲಿವುಡ್ ಹಾಗೂ ಸೌತ್ ಇಂಡಿಯನ್ ಫಿಲಂ ಇಂಡಸ್ಟ್ರಿಯ ಬಿಗ್ಗಿಸ್ಗಳ ನಡುವೆ ರಿಲೀಸ್ ಆಗೋದಕ್ಕೆ ಹೊರಟಿದ್ದು ಮುಂದಿಟ್ಟ ಹೆಜ್ಜೆಯನ್ನ ಹಿಂದೆ ಇಡುವಂತಹ ಪ್ರಶ್ನೆನೇ ಇಲ್ಲ ಅನ್ನೋದನ್ನ ಟಾಕ್ಸಿಕ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೊಮ್ಮೆ ಖಚ್ಚಿತ ಪಡಿಸಿದ್ದಾರೆ. ಅದರಲ್ಲೂ ಸ್ಪೆಷಲ್ ಆಗಿ ದುರಂದರ್ 2 ಸಿನಿಮಾ ಕೂಡ ಅದೇ ದಿನ ರಿಲೀಸ್ ಆಗೋದಕ್ಕೆ ರೆಡಿ ಮಾಡಿಕೊಂಡಿದೆ ಎನ್ನುವಂತಹ ಸುದ್ದಿ ಇದೆ. ಇವೆಲ್ಲವೂ ಟಾಕ್ಸಿಕ್ ರಿಲೀಸ್ ನ ಇನ್ನಷ್ಟು ಗ್ಲೋರಿಫೈ ಮಾಡೋದಕ್ಕೆ ಒಂದು ರೀಸನ್ ಕೊಟ್ಟಿದೆ ಅಂತಾನೆ ಹೇಳ್ತೀನಿ. ಖಂಡಿತವಾಗ್ಲೂ ಈ ಬ್ಯಾಟಲ್ ಎಪಿಕ್ ಆಗಿರುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ. ಬಿಲ್ಲ ರಂಗ ಭಾಷಾ ಕಿಚ್ಚ ಸುದೀಪ್ ರವರ ಸಿನಿಮಾ ಜೀವನದ ಅತ್ಯಂತ
ಬಹುನಿರೀಕ್ಷಿತ ಸಿನಿಮಾ ಬಿಲ್ಲರಂಗ ಭಾಷಾ ಸಿನಿಮಾ ಕೂಡ 2020ರ ಎಂಡಿಂಗ್ ನಲ್ಲಿ ರಿಲೀಸ್ ಆಗಲಿದೆ ಅನ್ನೋದನ್ನ ಕುದ್ದಾಗಿ ಕಿಚ್ಚ ಸುದೀಪ್ ರವರೇ ಇತ್ತೀಚಗಷ್ಟೇ ಇಂಟರ್ವ್ಯೂನಲ್ಲಿ ಹೇಳ್ಕೊಂಡಿದ್ದಾರೆ. ಬಿಗ್ ಬಾಸ್ ಶೂಟಿಂಗ್ ಹಾಗೂ ಮತ್ತೊಂದು ಸಿನಿಮಾದ ಶೂಟಿಂಗ್ ಜೊತೆಗೆ ಪ್ಯಾರಲಲ್ ಆಗಿ ಈ ಸಿನಿಮಾದ ಶೂಟಿಂಗ್ ಕೂಡ ನಡೀತಾ ಇದೆಯಂತೆ. ಕಿಚ್ಚ ಸುದೀಪ್ ರವರ ಸಿನಿಮಾ ಜೀವನದ ಅತ್ಯಂತ ಎಕ್ಸ್ಪೆನ್ಸಿವ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಇದು ಕಾಣಿಸಿಕೊಳ್ಳುತ್ತೆ. ಇನ್ನು ಅನೂಪ್ ಭಂಡಾರಿ ಅವರ ಡೈರೆಕ್ಷನ್ ಅಂದಮೇಲೆ ಗ್ರಾಂಡ್ ವಿಷುವಲ್ ಟ್ರೀಟ್ ಇದ್ದೆ ಇರುತ್ತೆ. ಪ್ರೊಡಕ್ಷನ್ ಹೌಸ್ ಕೂಡ ಸಾಕಷ್ಟು ಪ್ಯಾಷನೇಟ್ ಆಗಿರೋದ್ರಿಂದಾಗಿ ಒಂದು ಒಳ್ಳೆ ಪ್ರಾಡಕ್ಟ್ ನ
ನಾವು ಮುಂದಿನ ವರ್ಷದ ಎಂಡಿಂಗ್ ನಲ್ಲಿ ನೋಡಬಹುದಾಗಿದೆ. ಅದರಲ್ಲೂ ಸ್ಪೆಷಲ್ ಆಗಿ ಕೆಲವೊಂದು ಮಾಹಿತಿಗಳ ಪ್ರಕಾರ ಈ ಸಿನಿಮಾದಲ್ಲಿ ಕಿಚ್ಚ ಸುದೀಪಾರ ಅವರು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ತಾ ಇದ್ದಾರೆ ಎನ್ನುವಂತಹ ಸುದ್ದಿ ಇದೆ. ಈ ಸಿನಿಮಾ ಎರಡು ಪಾರ್ಟ್ಗಳಲ್ಲಿ ಕೂಡ ಮೂಡಿ ಬರಬಹುದಾದಂತಹ ಸಾಧ್ಯತೆ ಇದೆಯಂತೆ. ಇದನ್ನ ಕೇಳ್ತಾ ಇದ್ರೆನೆ ಸಿನಿಮಾದ ಮೇಲಿರುವಂತಹ ಎಕ್ಸ್ಪೆಕ್ಟೇಶನ್ ಆಕಾಶದ ಎತ್ತರಕ್ಕೆ ಹೋಗ್ತಾ ಇದೆ. ತರಿಸಿ ಆಪರೇಷನ್ ಡ್ರೀಮ್ ಥಿಯೇಟರ್ ಹೇಮಂತ್ರ ರಾವ್ ನಿರ್ದೇಶನದಿಂದ ಸಿನಿಮಾ ಈ ಲಿಸ್ಟಲ್ಲಿ ಸ್ಥಾನವನ್ನ ಪಡ್ಕೊಂಡಿದೆ. 70ರ ದಶಕದ ಕಥೆಯನ್ನ ಶಿವಣ್ಣ ಹಾಗೂ ಡಾಲಿ ಧನಂಜಯ್ ನಾಯಕತ್ವದಲ್ಲಿ ಹೇಮಂತ್ ರಾವ್ ಕ್ಯಾಪ್ಟನ್ ಆಫ್ ದ
ಶಿಪ್ ಆಗಿ ಮುಂದೆ ತರೋದಕ್ಕೆ ಸಿದ್ಧವಾಗಿದ್ದಾರೆ. ಇಬ್ಬರ ಲುಕ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಿನಿಮಾದ ಮೇಕಿಂಗ್ ನ ಅಂದಿನ ಕಾಲಕ್ಕೆ ತಕ್ಕಂತೆ ಸಹಜವಾಗಿ ಮೂಡ್ ಬರುವಂತಹ ರೀತಿಯಲ್ಲೇ ಸೆಟ್ ಹಾಗೂ ಕ್ಯಾಮೆರಾ ಟೆಕ್ನಾಲಜಿಯನ್ನ ಕೂಡ ಈ ಸಿನಿಮಾಗಾಗಿ ಬಳಸಿಕೊಳ್ಳಲಾಗ್ತಿದೆ. ಸಿನಿಮಾದಲ್ಲಿ ನಾಯಕೆಯಾಗಿ ಪ್ರಿಯಾಂಕ ಮೋಹನ್ ಕಾಣಿಸಿಕೊಂಡಿದ್ದಾರೆ ಚರಣರಾಜ್ ಅವರ ಮ್ಯೂಸಿಕ್ ಕೂಡ ಸಿನಿಮಾಗೆ ಮತ್ತಷ್ಟು ಹೈಪ್ ಕೊಟ್ಟಿದೆ. ಸ್ಪೈ ತ್ರಿಲ್ಲರ್ ಜೊತೆಗೆ ಸೈಫೈ ಟ್ವಿಸ್ಟ್ನ್ನ ಕೂಡ ನಾವು ಎಕ್ಸ್ಪೆಕ್ಟ್ ಮಾಡಬಹುದು ಅನ್ನುವಂತಹ ಮಾತುಗಳು ಗಾಂಧಿನಗರದಲ್ಲಿ ಕೇಳಿಬರ್ತಾ ಇವೆ. ಗುಮ್ಮಡಿ ನರಸಯ್ಯ ಈ ಲಿಸ್ಟಅಲ್ಲಿ ಕಾಣಿಸಿಕೊಳ್ಳುವಂತಹ ಮತ್ತೊಂದು
ಶಿವಣ್ಣ ಅವರ ಸಿನಿಮಾ ಪರಮೇಶ್ವರ್ ಹಿವರಾಳೆ ಡೈರೆಕ್ಷನ್ ನಲ್ಲಿ ಮೂಡ್ ಬರ್ತಾ ಇರುವಂತಹ ರಿಯಲ್ ಲೈಫ್ ಇನ್ಸ್ಪೈರ್ಡ್ ಪೊಲಿಟಿಕಲ್ ತ್ರಿಲ್ಲರ್ ಸಿನಿಮಾ ಗುಮ್ಮಡಿ ನರಸಯ್ಯ 2026 ರಲ್ಲಿ ಅತ್ಯಂತ ನಿರೀಕ್ಷೆಯನ್ನ ಹುಟ್ಟಾಕಿರುವಂತಹ ಸಿನಿಮಾಗಳಲ್ಲಿ ಇದು ಕಾಣಿಸಿಕೊಳ್ಳುತ್ತೆ ತೆಲಂಗಾಣದ ಹಿರಿಯ ರಾಜಕಾರಣಿಯಾಗಿರುವಂತಹ ಗುಮ್ಮಡಿ ನರಸಯ್ಯ ಅವರ ಜೀವನಾಧಾರಿತ ಕಥೆಯನ್ನ ಈ ಸಿನಿಮಾ ಹೊಂದಿದ್ದು ಶಿವಣ್ಣ ಮೊದಲ ಬಾರಿಗೆ ಒಂದು ಬಯೋಪಿಕ್ ಮಾಡ್ತಾ ಇರೋದು ಇಂಟರೆಸ್ಟಿಂಗ್ ಆಗಿದೆ ಇತ್ತೀಚಿನ ವರ್ಷಗಳಲ್ಲಿ ಶಿವಣ್ಣ ಅವರ ಸ್ಕ್ರಿಪ್ಟ್ ಸೆಲೆಕ್ಷನ್ ವೇರಿಯೇಷನ್ ಅವರ ಸಿನಿಮಾವನ್ನ ನೋಡಬೇಕು ಎನ್ನುವಂತಹ ಕುತುಹಲವನ್ನ ಕೂಡ ಆಡಿಯನ್ಸ್ ಗೆ ಹೆಚ್ಚು ಮಾಡಿಸಿದೆ. ನೋಡೋಣ ಈ
ಬಯೋಪಿಕ್ ಹೇಗೆ ಮೂಡ್ ಬರುತ್ತೆ ಅಂತ. ಈ ಲಿಸ್ಟ್ನಲ್ಲಿ ಕೊನೆಯದಾಗಿ ಕಾಣಿಸಿಕೊಳ್ಳುವಂತಹ ಈ ಸಿನಿಮಾದ ಬಗ್ಗೆ ನಾನು ಸ್ವಲ್ಪ ಡೌಟ್ ಅಲ್ಲೇ ಹೇಳ್ಬೇಕಾಗುತ್ತೆ. ಆದರೂ ಕೂಡ ಮನಸ್ಸಿನ ಯಾವುದೋ ಒಂದು ಮೂಲೆಯಲಿ ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗುತ್ತೆ ಅನ್ನುವಂತಹ ನಂಬಿಕೆ ಇದೆ. ಯಾಕಂದ್ರೆ ಈ ಸಿನಿಮಾಗಾಗಿ ಜನ ಕಳೆದ ಎರಡು ಮೂರು ವರ್ಷಗಳಿಂದ ಕಾಯ್ತಾ ಇದ್ದಾರೆ. ಎಸ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ರಿಚರ್ಡ್ ಆಂಟೋನಿ ಸಿನಿಮಾದ ಬಗ್ಗೆ ನಾನು ಮಾತಾಡ್ತಾ ಇರೋದು. ಒಂದು ಕಡೆ ಅಮೆರಿಕಾದಲ್ಲಿ ರಕ್ಷಿತ್ ಶೆಟ್ಟಿ ಈ ಸಿನಿಮಾದ ಕ್ಲೈಮ್ಯಾಕ್ಸ್ ಸ್ಕ್ರಿಪ್ಟ್ ನ್ನ ಕಂಪ್ಲೀಟ್ ಮಾಡ್ಕೊಂಡು ಬಂದಿದ್ದಾರೆ ಅನ್ನುವಂತಹ ಸುದ್ದಿ ಇದೆ. ಇನ್ನೊಂದು ಕಡೆ ಇನ್ನೇನು ಶೂಟಿಂಗ್
ಸ್ಟಾರ್ಟ್ ಆಗೆ ಬಿಡುತ್ತೆ ಅನ್ನುವಂತಹ ಮಾತು ಕೂಡ ಕೇಳಿಬರುತ್ತೆ. ನನ್ನ ಮನಸ್ಸು ಹೇಳೋ ಪ್ರಕಾರ ಪ್ರತಿಯೊಂದು ಕೆಲಸನ ಮೊದಲೇ ಪ್ರೀ ಪ್ಲಾನ್ ಮಾಡ್ಕೊಂಡು ನಮ್ಮ ಶಟ್ರು ಮಾರ್ಕ್ ಸಿನಿಮಾದ ರೀತಿಯಲ್ಲಿ ಬೇಗ ಶೂಟಿಂಗ್ ಮಾಡಿ ಮುಗಿಸ್ತಾರೆ ಅಂತ ಅನ್ನಿಸ್ತಿದೆ. ಇವೆಲ್ಲವೂ ನಮ್ಮ ಮನಸ್ಸಿನ ಆಸೆ ಮಾತ್ರ. ಅವರಿಗೆ ಯಾವತ್ತು ಡಿಸೆಂಬರ್ ಎಂಡಿಂಗ್ ಲಕ್ಕಿ ಟೈಮ್ ಹೀಗಾಗಿ ರಿಚರ್ಡ್ ಆಂಟೋನಿ ನೆಕ್ಸ್ಟ್ ಕ್ರಿಸ್ಮಸ್ ಗೆ ರಿಲೀಸ್ ಆದರೂ ಕೂಡ ಆಶ್ಚರ್ಯ ಇಲ್ಲ. ಆದ್ರೆ ಒಂದು ಮಾತು ಹೇಳ್ಬೇಕು ಅನ್ಸುತ್ತೆ ನಮ್ಮ ಜನ ಈ ಸಿನಿಮಾಗಾಗಿ ಕಾದಷ್ಟು ಬೇರೆ ಯಾವುದೇ ಸಿನಿಮಾಗಾಗಿ ಕಾದಿಲ್ಲ ಅಂತ ಶಟ್ರೆ ಆದಷ್ಟು ಬೇಗ ಎಂತದ ಮಕ್ಕಳ ಶೂಟ್ ಮಾಡಬೇಕಾ ಅಂತ ಹುಲಿ ಡ್ಯಾನ್ಸ್ ಮಾಡ್ಕೊಂಡು ಬಂದ್ಬಿಡಿ
ನಿಮಗಾಗಿ ನಾವೆಲ್ಲರೂ ವೈಟಿಂಗ್ ಇವಿಷ್ಟು ಮುಂದಿನ ವರ್ಷ ನಮ್ಮ ಕನ್ನಡದ ಆಡಿಯನ್ಸ್ ಕಾಯ್ತಾ ಇರುವಂತಹ ಮೋಸ್ಟ್ ಡಿಮ್ಯಾಂಡಿಂಗ್ ಅಥವಾ ಹೈ ಎಕ್ಸ್ಪೆಕ್ಟೆಡ್ ಇರುವಂತಹ ಸ್ಟಾರ್ ಸ್ಟಾರ್ಟಡೆಡ್ ಸಿನಿಮಾಗಳು ನೀವು ಯಾವ ಸಿನಿಮಾಗ ಕಾಯ್ತಾ ಇದ್ದೀರಾ ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ಇನ್ನು ಸುಮಾರಷ್ಟು ಸಿನಿಮಾಗಳಿದೆ ಬಟ್ ಈ ಪಟ್ಟಿಯಲ್ಲಿ ಎಲ್ಲವನ್ನ ಸೇರಿಸಕ್ಕೆ ಆಗಲ್ಲ ಅಂತ ಲಿಮಿಟ್ ಮಾಡ್ಕೊಂಡಿದೀವಿ ಇದರ ಪಾರ್ಟ್ ಟು ವಿಡಿಯೋ ಬೇಕು ಅಂದ್ರೆ ಅದರ ಬಗ್ಗೆ ಕೂಡ ಕಾಮೆಂಟ್ ಮಾಡಿ ಮಾಡುವಂತಹ ಪ್ರಯತ್ನ ನಾನು ಮಾಡ್ತೀನಿ ಸೈನಿಂಗ್ ಆಫ್ ಮನು.
Most Expected Kannada Movies 2026
upcoming kannada movies 2026
most expected kannada movies 2026 list
most expected kannada movies 2026 january
most expected kannada movies 2026 download
new kannada movies released this week
new kannada movies list
new kannada movie release tomorrow
new kannada movies released this week in theatres
