Kalasha Pooja: ಕಳಸ ಇಟ್ಟು ಪೂಜೆ ಮಾಡುವವರು ಓದಲೇಬೇಕು

NS CREATION FF
0

 

Kalasha Pooja


ಕಳಸ ಮನೆಯಲ್ಲಿ ಇಟ್ಟು ಪೂಜೆ ಮಾಡುವ ಪ್ರತಿಯೊಬ್ಬರು ತಿಳಿದಿರಲೇಬೇಕಾದ ವಿಷಯಗಳು ಕೆಲವರ ಮನೆಯಲ್ಲಿ ಮನೆ ದೇವರ ಹೆಸರಿನಲ್ಲಿ ಕಳಸ ಇಡುತ್ತಾರೆ ಇನ್ನು ಕೆಲವರು ಲಕ್ಷ್ಮಿ ಕಳಸ ಇಡುತ್ತಾರೆ ಆದರೆ ತಿಳಿಯಿರಿ ಕಳಸ ಎಂದರೆ ಅದು ತಾಯಿ ಮಹಾಲಕ್ಷ್ಮಿ ಸ್ವರೂಪ ಆದ್ದರಿಂದ ಕಳಸವನ್ನು ಇಡುವಾಗ ತುಂಬಾ ಹುಷಾರಾಗಿರಬೇಕು ಲಕ್ಷ್ಮಿ ಸ್ವರೂಪವಾದ ಕಳಸದ ಬಗ್ಗೆ ತಿಳಿಯೋಣ ಆದರೆ ಅದಕ್ಕೂ ಮೊದಲು ಲಕ್ಷ್ಮೀದೇವಿಯ ಆಶೀರ್ವಾದವು ನಿಮ್ಮ ಮೇಲೆ ಇರಬೇಕೆಂದು ನೀವು ಬಯಸಿದರೆ  ಕಾಮೆಂಟ್ ಬಾಕ್ಸ್ ನಲ್ಲಿ ಓಂ ಲಕ್ಷ್ಮಿ ನಾರಾಯಣಾಯ ಎಂದು ಬರೆಯಿರಿ ಕಳಸಕ್ಕೆ ಸ್ಟೀಲ್ ಅಥವಾ ಬೆಳ್ಳಿ ಕೋಟಿಂಗ್ ಮಾಡಿರುವ


ಆರ್ಟಿಫಿಷಿಯಲ್ ಕಳಸದ ಚೊಂಬನ್ನು ಬಳಸಬೇಡಿ ಕಳಸಕ್ಕೆ ತಾಮ್ರ ಹಿತ್ತಾಳೆ ಬೆಳ್ಳಿ ಚೊಂಬುಗಳು ತುಂಬಾ ಶ್ರೇಷ್ಠ ನಿಮಗೆ ಯಾವುದು ಅನುಕೂಲ ನಿಮ್ಮ ಶಕ್ತಿಗೆ ಅನುಗುಣವಾಗಿ ಇಟ್ಟು ಪೂಜೆ ಮಾಡುವುದು ಉತ್ತಮ ನಿಮ್ಮ ಮನೆಯಲ್ಲಿ ಹಿರಿಯರು ಹೇಗೆ ಕಳಸ ಸ್ಥಾಪನೆ ಮಾಡಿ ಪೂಜೆ ಮಾಡುತ್ತಿದ್ದರೋ ಅದೇ ರೀತಿ ಪೂಜೆ ಮಾಡುವುದು ಕೂಡ ಬಹಳ ಶ್ರೇಷ್ಠ ಕೆಲವರ ಮನೆಯಲ್ಲಿ ಮನೆ ದೇವರ ಕಳಸ ಇಡುತ್ತಾರೆ ಇನ್ನು ಕೆಲವರು ಲಕ್ಷ್ಮಿ ಕಳಸ ಇಡುತ್ತಾರೆ ಮತ್ತು ಕಾಯಿ ಕಳಸ ಎಲೆ ಕಳಸ ಈ ರೀತಿ ಅವರದೇ ಆದ ಸಂಪ್ರದಾಯ ಅನುಸರಿಸುತ್ತಾ ಇರುತ್ತಾರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಳಸ ಇಡುವುದಾದರೆ ಕಳಸಕ್ಕೆ ಮಾಂಗಲ್ಯ ಹಾಕುವುದು ಬಹಳ ಒಳ್ಳೆಯದು ಇಲ್ಲದಿದ್ದರೆ ಅರಿಶಿಣದ ಕೊಂಬನ್ನಾದರೂ ಕಟ್ಟಬೇಕು ನೆನಪಿಡಿ


ಕಳಸವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ ಒಂದು ತಟ್ಟೆಗೆ ಮೂರು ಹಿಡಿ ಅಥವಾ ಐದು ಹಿಡಿ ಅಕ್ಕಿ ಹಾಕಿ ಅದಕ್ಕೆ ಅರಿಶಿನ ಕುಂಕುಮ ಹಾಕಿ ಉಂಗುರದ ಬೆರಳಿನಿಂದ ಅಷ್ಟದಳದ ಕಮಲ ಬಿಡಿಸಿ ಅದರ ಮೇಲೆ ಕಳಸ ಸ್ಥಾಪನೆ ಮಾಡುವುದು ತುಂಬಾ ಶ್ರೇಷ್ಠ ಕಳಸಕ್ಕೆ ಇಡುವ ತೆಂಗಿನಕಾಯಿಯನ್ನು ಆರಿಸುವಾಗ ತೆಂಗಿನಕಾಯಿಗೆ ಚುಟ್ಟು ಇರಬೇಕು ಕಣ್ಣು ಕಾಣಿಸದ ತೆಂಗಿನಕಾಯಿ ಇಡಬೇಕು ಇದು ಬಹಳ ಮುಖ್ಯ ಕಳಸಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆ ಯಾವುದಾದರೂ ಇಡಬಹುದು ಆದರೆ ಎಲೆ ಹರಿದಿರಬಾರದು ತೂತಾಗಿರಬಾರದು ಎಲೆಗಳು ಒಂದೇ ಅಳತೆಯಲ್ಲಿ ಇರಬೇಕು ಕಳಸಕ್ಕೆ ಹಾಕುವ ನೀರು ತೆಂಗಿನಕಾಯಿಗೆ ತಾಕುವಂತೆ ಇರಲಿ ಆದರೆ ಚೊಂಪಿನಿಂದ ಚೆಲ್ಲುವಂತೆ ಹಾಕಬೇಡಿ ಕಳಸಕ್ಕೆ ಶುದ್ಧವಾದ ಚೊಂಬನ್ನು ಇಡಬೇಕು


ಅದಕ್ಕೆ ಅರಿಶಿನ ಕುಂಕುಮ ಗಂಧ ಹಚ್ಚಿ ಶುದ್ಧವಾದ ನೀರು ಹಾಕಿ ನಂತರ ನೀರಿಗೆ ಒಂದು ಚಿಟಿಕೆ ಅರಿಶಿನ ಕುಂಕುಮ ಹಾಕಿ ಒಂದು ಹೂವು ಹಾಕಿ ಒಂದು ನಾಣ್ಯ ಹಾಕಿ ಯಾವುದಾದರೂ ಸರಿ ಹಿತ್ತಾಳೆ ಬೆಳ್ಳಿ ಅಥವಾ ಮಾಮೂಲಿ ನಾಣ್ಯ ಕೂಡ ಆದರೂ ಸರಿ ಮರೆಯದೆ ಹಾಕಿ ಇದು ಪ್ರಾಣದ ಪ್ರತೀಕ ಇನ್ನು ಕೆಲವರು ಕವಡೆ ಗೋಮತಿ ಚಕ್ರ ಕಮಲದ ಬೀಜ ಇತ್ಯಾದಿ ಹಾಕುತ್ತಾರೆ ಆದರೆ ಇದು ಹಬ್ಬ ಹರಿದಿನಗಳಲ್ಲಿ ಹಾಕಿದರೆ ಸಾಕು ಕಳಸ ಪ್ರತಿಷ್ಠಾಪನೆ ಮಾಡಿದ ಮೇಲೆ ಪದೇಪದೇ ಮುಟ್ಟುವುದು ಹೂವು ಸರಿಪಡಿಸುವುದು ಮಾಡಬೇಡಿ ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆ ಏಕಾದಶಿ ಪವಿತ್ರ ಹಬ್ಬದ ದಿನಗಳಲ್ಲಿ ಕಳಸ ಕದಲಿಸಬೇಡಿ ಒಂದು ದಿನ ಮುಂಚಿತವಾಗಿ ತೆಗೆದು ಸ್ವಚ್ಛ ಮಾಡಿ ಈ


ದಿನಗಳಲ್ಲಿ ಕಳಸ ಸ್ಥಾಪನೆ ಮಾಡಿದರೆ ಮನೆಗೆ ಬಹಳ ಒಳ್ಳೆಯದು ಕಳಸ ಕದಲಿಸುವಾಗ ಮೂರು ಸಲ ಬಲಕ್ಕೆ ಸರಿಸಿ ನಂತರ ತೆಗೆಯಬೇಕು ಕಳಸ ಕದಲಿಸಿದ ಮೇಲೆ ನೀರನ್ನು ತೆಂಗಿನ ಮರ ಅಥವಾ ತುಳಸಿ ಗಿಡಕ್ಕೆ ಹಾಕಿ ಯಾರು ತುಳಿಯಬಾರದು ಈ ಎಲ್ಲಾ ನಿಯಮಗಳನ್ನು ಪಾಲಿಸಿ ಮನೆಯಲ್ಲಿ ಕಳಸವನ್ನು ಇಟ್ಟರೆ ಮಹಾಲಕ್ಷ್ಮಿ ತಾಯಿ ಸದಾ ಮನೆಯಲ್ಲಿಯೇ ಇದ್ದು ಸಂಪತ್ತು ಸಮೃದ್ಧಿ ಆರೋಗ್ಯ ಭಾಗ್ಯ ಕೊಟ್ಟು ಕರುಣಿಸುತ್ತಾಳೆ ನಿಮಗೆ ಅಷ್ಟೈಶ್ವರ್ಯ ಲಭಿಸುತ್ತದೆ 

Tags

Post a Comment

0Comments

Post a Comment (0)
To Top